ಹುಬ್ಬಳ್ಳಿ ರೇಲ್ವೆ ನಿಲ್ದಾಣದಲ್ಲಿ ಕೂತಲ್ಲೇ ಪ್ರಾಣಬಿಟ್ಟ…!

ಹುಬ್ಬಳ್ಳಿ: ರಾಜ್ಯಾಧ್ಯಂತ ಸಾರಿಗೆ ಸಂಸ್ಥೆಯ ಹೋರಾಟ ನಡೆಯುತ್ತಿದ್ದರಿಂದ ರೇಲ್ವೆ ನಿಲ್ದಾಣದಲ್ಲಿ ತನ್ನೂರಿಗೆ ಹೋಗಬೇಕೆಂದುಕೊಂಡು ಬಂದಿದ್ದ ವ್ಯಕ್ತಿಯೋರ್ವ ಕೂತಲ್ಲೇ ಸಾವಿಗೀಡಾದ ಘಟನೆ ನಡೆದಿದೆ.

ಸುಮಾರು 45ರಿಂದ 50 ವಯಸ್ಸಿನ ಐದೂವರೆ ಅಡಿಯ ವ್ಯಕ್ತಿಯೇ ಸಾವಿಗೀಡಾಗಿದ್ದು, ಯಾವ ಕಾರಣಕ್ಕೆ ಪ್ರಾಣ ಹೋಗಿದೆ ಎಂದು ಗೊತ್ತಾಗಿಲ್ಲ. ರೇಲ್ವೆ ನಿಲ್ದಾಣದ ಬಳಿಯ ಮುಖ್ಯ ದ್ವಾರದ ಬಳಿಯ ಕಂಬಕ್ಕೆ ಒರಗಿ ಕುಳಿತಿದ್ದ, ವ್ಯಕ್ತಿಯನ್ನ ಯಾರೂ ಗಮನಿಸಿಯೇ ಇರಲಿಲ್ಲ. ಆದರೆ, ಮಧ್ಯಾಹ್ನದ ನಂತರ ಕುಳಿತ ವ್ಯಕ್ತಿ ಸಾವಿಗೀಡಾಗಿದ್ದಾನೆಂದು ಗೊತ್ತಾಗಿದೆ.
ಗೋಧಿ ಮೈ ಬಣ್ಣವನ್ನ ಹೊಂದಿರುವ ವ್ಯಕ್ತಿಯು ಕಪ್ಪು-ಬಿಳಿ ಮಿಶ್ರಿತ ಕೂದಲನ್ನ ಹೊಂದಿದ್ದಾರೆ. ಕೋಲು ಮುಖ, ನೇರವಾದ ಮೂಗು ಮತ್ತು ಸಾಧಾರಣ ಶರೀರವನ್ನ ಮೃತ ವ್ಯಕ್ತಿ ಹೊಂದಿದ್ದಾರೆ.
ಪ್ರಕರಣವನ್ನ ದಾಖಲು ಮಾಡಿಕೊಂಡಿರುವ ರೇಲ್ವೆ ಠಾಣೆಯ ಪೊಲೀಸರು ಮೃತ ದೇಹವನ್ನ ಶವಾಗಾರದಲ್ಲಿಟ್ಟಿದ್ದಾರೆ. ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕರೇ, ತಕ್ಷಣವೇ ಪೊಲೀಸರಿಗೆ ತಿಳಿಸುವಂತೆಯೂ ಕೋರಲಾಗಿದೆ.