ರೇಲ್ವೆ ಇಲಾಖೆಯಲ್ಲಿ ನಕಲಿ ಸಾಪ್ಟವೇರ್ ಬಳಕೆ: ಸಿಬಿಐ ತನಿಖೆಗೆ ರಾಜ್ಯ ಸರಕಾರ ಶಿಫಾರಸ್ಸು

ಬೆಂಗಳೂರು: ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದು, ರೈಲ್ವೇ ಇಲಾಖೆಯಲ್ಲಿ ನಕಲಿ ಸಾಫ್ಟ್‌ವೇರ್ ಸೃಷ್ಟಿಸಿ ಬೆಂಗಳೂರಲೂ ಮೋಸ ನಡೆದಿದೆ. ರೈಲ್ವೇ ಬೋರ್ಡ್ನ ಛೇರ್ಮನ್ ಸಿಬಿಐ ಗೆ ಪತ್ರ ಬರೆದಿದ್ದಾರೆ. ಅದರ ಅನ್ವಯ ರಾಜ್ಯ ಸರ್ಕಾರ ಕೂಡಾ ಸಿಬಿಐ ತನಿಖೆಗೆ ನೀಡುತ್ತೇವೆ ಎಂದಿದ್ದಾರೆ.
ಎಲ್ಲ ರಾಜ್ಯಗಳಲ್ಲಿ ಇಂಥ ವಂಚನೆ ನಡೆದಿದೆ. ನಕಲಿ ಸಾಫ್ಟ್‌ವೇರ್ ಬಳಸಿ ಟಿಕೆಟ್ ಬ್ಲಾಕ್ ಮಾಡಿ ಮಾರಲಾಗಿದೆ. ಹಾಗಾಗಿ ರೈಲ್ವೇ ಬೋರ್ಡ್ ಮನವಿಯಂತೆ ಸಿಬಿಐಗೆ ಕೊಡ್ತಿದ್ದೇವೆ. ಇದಕ್ಕೆ ಬೇಕಾದ ಸಹಕಾರವನ್ನ ರಾಜ್ಯ ಸರಕಾರ ನೀಡಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.