ಅಕ್ರಮ ಪಡಿತರ ದಾನ್ಯಗಳ ಸಂಗ್ರಹ: ತಹಶೀಲ್ದಾರ ಖಚಿತ ದಾಳಿಯಿಂದ ಬಹಿರಂಗ
ಬೀದರ: ಎಪಿಎಂಸಿ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಪಡಿತರ ಅಕ್ಕಿ, ಗೋಧಿ, ಬೇಳೆಯನ್ನ ಬೀದರ್ ಜಿಲ್ಲೆ ಹುಮನಾಬಾದ್ ಎಪಿಎಂಸಿ ಮಾರುಕಟ್ಟೆಯ ಗೋಡೌನ ಮೇಲೆ ತಹಶೀಲ್ದಾರ ನಾಗಯ್ಯಾ ಹಿರೇಮಠ ದಾಳಿ ನಡೆಸಿ ಪತ್ತೆ ಹಚ್ಚಿದ್ದಾರೆ.
ಖಚಿತ ಮಾಹಿತಿಯನ್ನ ಆದರಿಸಿ ಐದು ಕ್ವಿಂಟಾಲ್ ಅಕ್ಕಿ, ಮೂರು ಕ್ವಿಂಟಾಲ್ ಗೋಧಿ, ಮೂರು ಕ್ವಿಂಟಾಲ್ ತೊಗರಿ ಬೆಳೆ, ಎರಡು ಕ್ವಿಂಟಾಲ್ ಹಾಲಿನ ಪುಡಿಯನ್ನ ವಶಕ್ಕೆ ಪಡೆಯಲಾಗಿದೆ. ಹುಮನಾಬಾದ್ ಸುತ್ತಮುತ್ತಲೂ ಪಡಿತರ ದಾನ್ಯಗಳನ್ನ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಿ, ಹೆಚ್ಚಿನ ದರದ ದಾನ್ಯಗಳೊಂದಿಗೆ ಬೆರೆಸಿ ಮಾರಾಟ ಮಾಡುತ್ತಿದ್ದರೆಂಬ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.
ತಹಶೀಲ್ದಾರ ಆದೇಶದಂತೆ ಆಹಾರ ಇಲಾಖೆ ಅಧಿಕಾರಿಗಳಿಂದ ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.