ಸಿಎಂ ತವರಲ್ಲೇ ರಾಜ್ಯದ ಬಿಗ್ ರೇಡ್: 11 ಜನರ ಬಂಧನ- 30ಲಕ್ಷದ ನಗದು-ವಾಹನ ವಶ

ಶಿವಮೊಗ್ಗ: ಸಿಎಂ ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟಾಡುತ್ತಿದ್ದ 11 ಜನರನ್ನ ಬಂಧಿಸಿರುವ ಪೊಲೀಸರು, ಬಂಧನ, ಐವತ್ತೆರಡು ಸಾವಿರ ನಗದು, 29, 60,000 ಮೌಲ್ಯದ 04 ಕಾರುಗಳು, 01 ದ್ವಿ ಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗದ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ವೀರನಬೆನವಳ್ಳಿ ಗ್ರಾಮದ ರವಿಕುಮಾರ್ ಎಂಬುವವರ ಮಾವಿನ ತೋಟದ ಹತ್ತಿರ ಜೂಜಾಟದ ಬಗ್ಗೆ ಖಚಿತ ಮಾಹಿತಿ ಪಡೆದ ಶಿವಮೊಗ್ಗ ಡಿಎಸ್ ಪಿ ಉಮೇಶ್ ನಾಯಕ್ ಮಾರ್ಗದರ್ಶನದಲ್ಲಿ, ಗ್ರಾಮಾಂತರ ಸಿಪಿಐ ಸಂಜೀವ್ ಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದೆ.
ಕೊರೋನಾ ಸಮಯದಲ್ಲಿ ನಡೆದ ರಾಜ್ಯದ ಬಿಗ್ ರೇಡ್ ಇದಾಗಿದ್ದು, ಕೆ.ಎಸ್.ಈಶ್ವರಪ್ಪ ಉಸ್ತುವಾರಿ ಹೊಂದಿರುವ ಜಿಲ್ಲೆಯಲ್ಲಿ ಇಂತಹ ಅಕ್ರಮ ನಡೆಯುತ್ತಿರುವುದು ಅಸಹನೀಯ.