ಕಂಟ್ರಿ ಪಿಸ್ತೂಲ್- 27ಕೆಜಿ ಗಾಂಜಾ-15 ‘ಗಾಂಜಿಗರು- ಕಾರುಗಳೂ.. ಮೊಬೈಲ್ ಗಳೂ.. ಕಾರ್ಯಾಚರಣೆ ಹೇಗಿತ್ತು ಗೊತ್ತಾ..?
1 min readಬೆಳಗಾವಿ/ಕಲಬುರಗಿ: ಎರಡು ಜಿಲ್ಲೆಗಳಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 15 ಜನರನ್ನ ಬಂಧಿಸಿ ಬರೋಬ್ಬರಿ 28 ಕೆಜಿ ಗಾಂಜಾವನ್ನ ವಶಕ್ಕೆ ಪಡೆದಿದ್ದು, ನಾಲ್ಕು ಬೈಕ್, ಕಾರು ಮತ್ತು ಕಂಟ್ರಿ ಪಿಸ್ತೂಲನ್ನೂಜಪ್ತಿ ಮಾಡಿದ್ದಾರೆ.
ಬೆಳಗಾವಿ: ಎಸಿಪಿ ನಾರಾಯಣ ಭರಮನಿ ಟೀಂ ಕಾರ್ಯಾಚರಣೆ
ಬೆಳಗಾವಿಯಲ್ಲಿ 15 ಕೆಜಿ 500 ಗ್ರಾಂ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಬೆಳಗಾವಿ ಕ್ರೈಂ ಬ್ರಾಂಚ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿಯ ಹೋಲ್ ಸೇಲ್ ಪ್ರೂಟ್ ಮಾರ್ಕೆಟ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂಲತಃ ನಿಪ್ಪಾಣಿ ತಾಲೂಕಿನ ಸಾ! ನಾಗರಮುನ್ನೋಳಿ ಹಾಲಿ ಮುಗುಳಖೋಡ ಗ್ರಾಮದ ಮಲ್ಲಪ್ಪ ಸಿದ್ರಾಮಣಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ, ಈತನಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ, ಕಲ್ಬುರ್ಗಿ ಜಿಲ್ಲೆಯ ಇಬ್ಬರನ್ನು ಬಂಧಿಸಿ ಒಟ್ಟು ಎರಡೂವರೆ ಲಕ್ಷ ಮೌಲ್ಯದ 15 ಕೆಜಿ 500 ಗ್ರಾಂ ಗಾಂಜಾ ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಿಸಿಐಬಿ ಎಸಿಪಿ ನಾರಾಯಣ ಭರಮನಿ ಮಾರ್ಗದರ್ಶನದಲ್ಲಿ ಸಿಪಿಐ ಸಂಜೀವ ಕಾಂಬಳೆ ಕಾರ್ಯಾಚರಣೆ ನಡೆಸಿದ್ದರು.
ಗಡ್ಡೇಕರ ಟೀಂ ಮಾಡಿದ್ದೇನು..
ಬೆಳಗಾವಿಯ ಮಾಳಮಾರುತಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಐದೂವರೆ ಕೆಜಿ ಗಾಂಜಾ ವಶಪಡಿಸಿಕೊಂಡು ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಸಿಪಿಐ ಗಡ್ಡೇಕರ ನೇತೃತ್ವದಲ್ಲಿ ದಾಳಿ ಮಾಡಿ ಅಟೋ ನಗರದಲ್ಲಿ ಗಾಂಜಾ ದಂಧೆ ನಡೆಸುತ್ತಿದ್ದ ಆರು ಜನರನ್ನು ಬಂಧಿಸಿದ್ದಾರೆ. ಬಂಧಿತರಿಂದ ಬೈಕ್ ಮತ್ತು ಹತ್ತು ಸಾವಿರ ರೂ ನಗದು ಹಣ ವಶಪಡಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬೆಳಗಾವಿಯಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಪೊಲೀಸರು ಯಶಸ್ವಿಯಾಗುತ್ತಿದ್ದಾಮಾಳಮಾರುತಿ , APMC, ಸಿಸಿಐಬಿ ಪೊಲೀಸರು ಕೂಡಿ ಇಂದು ಬೆಳಗಾವಿಯಲ್ಲಿ ಒಟ್ಟು ಮೂರು ಗಾಂಜಾ ದಾಳಿ ನಡೆಸಿದ್ದಾರೆ. 3 ಗಂಜಾ ದಾಳಿಯಲ್ಲಿಒಟ್ಟು ಪ್ರಮಾಣದಲ್ಲಿ 27 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
13 ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ 11 ಮೊಬೈಲ್‌ಗಳು, 1 ಕಾರು, 3 ಬೈಕ್‌ಗಳು ಮತ್ತು ಸುಮಾರು 15000 ನಗದು ವಶಪಡಿಸಿಕೊಳ್ಳಲಾಗಿದೆ.
ಜೇವರ್ಗಿ ಪೊಲೀಸ್ ಕಾರ್ಯಾಚರಣೆ
ಕಲಬುರಗಿ ಜಿಲ್ಲೆ ಜೇವರ್ಗಿ ಪಟ್ಟಣದಲ್ಲಿ ಇಬ್ಬರು ಗಾಂಜಾ ಮಾರಾಟಗಾರರ ಬಂಧನ ಮಾಡಲಾಗಿದೆ. ಬಂಧಿತ ಲಾಲ ಅಹ್ಮದ ಯಾದಗಿರಿ ಜಿಲ್ಲೆ ಠಾಣಾಗುಂಡಿ ಗ್ರಾಮದವನಾಗಿದ್ದು, ಚಂದ್ರಶೇಖರ ಬೆಂಗಳೂರಿನ ದೊಡ್ಡಬಳ್ಳಾಪುರ ಮೂಲದವನಾಗಿದ್ದಾನೆ.
ಬಂಧಿತರಿಂದ 10 ಸಾವಿರ ಮೌಲ್ಯದ ಗಾಂಜಾ, 1 ಕಂಟ್ರಿಮೇಡ್ ಪಿಸ್ತೂಲ್, ಸ್ವೀಫ್ಟ್ ಕಾರ್, 2.94 ಲಕ್ಷ ರೂ ನಗದು, 3 ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.