ಮಹಿಳೆಯನ್ನ ಬಳಸಿಕೊಂಡು ಗಾಂಜಾ ಮಾರಾಟ- ಹೆಡಮುರಿಗೆ ಕಟ್ಟಿದ ಸಿಪಿಐ ಪ್ರವೀಣ ನೀಲಮ್ಮನವರ
ಶಿವಮೊಗ್ಗ: ರಾಜಧಾನಿಯಲ್ಲಿ ಮಾದಕ ವಸ್ತುವಿನ ಕರಾಳ ಮುಖ ಬಯಲಾಗುತ್ತಿದ್ದಂತೆ ರಾಜ್ಯದ ಜಿಲ್ಲೆ ಜಿಲ್ಲೆಯಲ್ಲೂ ಮಾದಕ ವಸ್ತುಗಳ ಬೇಟೆಗೆ ಪೊಲೀಸರು ಪಣತೊಟ್ಟಿದ್ದು, ಈ ದಂಧೆಯ ಕರಾಳ ಮುಖಗಳು ಒಂದಾದಾಗಿ ಬಯಲಾಗತೊಡಗಿವೆ.
ಸಿನೇಮಾ ನಟ-ನಟಿಯರ ನಸೆಯ ಚಹರೆಗಳು ಬಯಲಾಗುತ್ತಿರುವುದು ಒಂದೇಡೆಯಾದರೇ, ಗ್ರಾಮೀಣ ಪ್ರದೇಶದಲ್ಲಿಯೂ ನಿರಾಂತಕವಾಗಿ ನಡೆಯುತ್ತಿದ್ದ ಗಾಂಜಾ ಮಾರಾಟವನ್ನ ಪೊಲೀಸರು ಬಯಲಿಗೆ ಎಳೆಯುತ್ತಿದ್ದಾರೆ. ಅದಕ್ಕೆ ಹೊಸದೊಂದು ಸೇರ್ಪಡೆಯಾಗಿದ್ದೇ ಈ ಮಹಿಳೆಯನ್ನ ಬಳಕೆ ಮಾಡಿ ಗಾಂಜಾ ಮಾಡುತ್ತಿರುವುದು.
ಮೂಲತಃ ಕಾರ್ಕಳ ಮೂಲದ ಜೀನತ್ ಎಂಬ ಮಹಿಳೆಯನ್ನು ಬಳಸಿಕೊಂಡು ಮುಬಾರಕ್, ಜಾಬೀರ್, ಜೀಸನ್ ಎಂಬ ಮೂವರು ಆರೋಪಿಗಳು ಪೊಲೀಸರಿಗೆ ಸಂಶಯ ಬರಬಾರದೆಂಬ ನಿಟ್ಟಿನಲ್ಲಿ ಸರಿ ಸುಮಾರು ಎರಡು ಕೆ.ಜಿ ಗಾಂಜಾವನ್ನು ಸ್ವಿಫ್ಟ್ ಕಾರಿನ ಬಾನೆಟ್ ನಲ್ಲಿಟ್ಟು ಮಾರಾಟಕ್ಕೆ ಸಾಗಾಟ ನಡೆಸುತ್ತಿದ್ದರೆನ್ನಲಾಗಿದೆ.
ಸಂಬಂಧಿಗಳಾದ ನಾಲ್ವರೂ ಕಾರಿನಲ್ಲಿ ಗಾಂಜಾ ತುಂಬಿಸಿಕೊಂಡು ಸಾಗರ,ಕಾರ್ಕಳ….. ಹೀಗೆ ದಾರಿಯುದ್ದಕ್ಕೂ ಅಲ್ಲಲ್ಲಿ ಮಾರಾಟದ ಮೂಲಗಳನ್ನು ಇಟ್ಟಕೊಂಡು ಜೀನತ್ ಎಂಬ ಮಹಿಳೆಯನ್ನು ಬಳಸಿ ಮಾರಾಟ ಮಾಡಲೆಂದು ತೀರ್ಥಹಳ್ಳಿ ಮಾರ್ಗವಾಗಿ ಬರುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ಡಿವೈಎಸ್ಪಿ ಸಂತೋಷ್ ನಿರ್ದೇಶನದಂತೆ ದಾಳಿ ನಡೆಸಿದ ತೀರ್ಥಹಳ್ಳಿ ಸಿಪಿಐ ಪ್ರವೀಣ್ ನೀಲಮ್ಮನವರ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಸುಷ್ಮಾ ನೇತೃತ್ವದಲ್ಲಿ ಸಿಬ್ಬಂದಿಗಳಾದ ಜಗದೀಶ್, ಜನಾರ್ದನ್, ಲೋಕೇಶ್ ,ಸುರಕ್ಷಿತ್ ಶೆಟ್ಟಿ ,ರವಿ ಮತ್ತಿತರರ ತಂಡ ಎರಡು ಕೆ.ಜಿ ಗೂ ಅಧಿಕ ಗಾಂಜಾವನ್ನು ವಶಕ್ಕೆ ಪಡೆದು ನಾಲ್ವರು ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿಕೊಳ್ಳಲಾದ KA 47 M 18307 ನಂಬರಿ ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.


