ಅಮ್ಮಿನಬಾವಿ ಬಳಿಯ ಮಾಸೂರ ಕ್ರಷರ್ ನಲ್ಲಿ ಸ್ಪೋಟಕ ವಸ್ತುಗಳು ಪತ್ತೆ…!
1 min readಧಾರವಾಡ: ರಾಜ್ಯದ ಹಲವೆಡೆ ನಡೆಯುತ್ತಿರುವ ಸ್ಪೋಟಕಗಳನ್ನ ಗಮನದಲ್ಲಿಟ್ಟುಕೊಂಡು ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸ್ಪೋಟಕ ವಸ್ತುಗಳು ಪತ್ತೆಯಾಗಿದ್ದು, ಕ್ರಷರ್ ಮಾಲೀಕ ಸೇರಿದಂತೆ ಮೂವರನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಡಿ.ಬಿ.ಮಾಸೂರ ಸ್ಟೋನ್ ಕ್ರಷಿಂಗ್ ಇಂಡಸ್ಟ್ರೀಸ್ ಮಾಲೀಕ ದಯಾನಂದ ಬಸವರಾಜ ಮಾಸೂರ, ಕ್ರಷರ್ ಕಾರಕೂನ ಕೆಲಸ ಮಾಡುವ ಶಂಕರಗೌಡ ಶಿವನಗೌಡ ಗೌಡ್ರ ಹಾಗೂ ಬಾಗಲಕೋಟೆಯ ನವೀನಕುಮಾರ ವಾಲಿ ಎಂಬುವವರನ್ನ ಬಂಧನ ಮಾಡಲಾಗಿದೆ. ವಾಲಿ ಎಂಬಾತನಿಂದ ಅಕ್ರಮವಾಗಿ ತರಿಸಿಕೊಳ್ಳುತ್ತಿದ್ದ ಸ್ಪೋಟಕಗಳನ್ನ ವಶಕ್ಕೆ ಪಡೆಯಲಾಗಿದೆ.
ಕ್ರಷರನಲ್ಲಿದ್ದ 1650 ಜಿಲೆಟಿನ್ ಕಡ್ಡಿಗಳು, 700 ಎಲೆಕ್ಟ್ರಾನಿಕ್ ಡಿಟೋನೇಟರಗಳನ್ನ ವಶಕ್ಕೆ ಪಡೆಯಲಾಗಿದೆ. ಕ್ರಷರ್ ಪಾಯಿಂಟಿನಲ್ಲಿ ಇವೇಲ್ಲವುಗಳನ್ನ ಮುಚ್ಚಿಡಲಾಗಿತ್ತು.
ಧಾರವಾಡ ಗ್ರಾಮೀಣ ಠಾಣೆ ಇನ್ಸಪೆಕ್ಟರ್ ಶ್ರೀಧರ ಸತಾರೆ ದಾಳಿಯ ನೇತೃತ್ವ ವಹಿಸಿದ್ದು, ಸಬ್ ಇನ್ಸಪೆಕ್ಟರ್ ಮಹೇಂದ್ರಕುಮಾರ ನಾಯಕ ಸೇರಿದಂತೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.