ಹುಬ್ಬಳ್ಳಿ ಬೋಲೆರೋ “ಗೋವಾ ಮಾಲ್” ವಶ: ಇಬ್ಬರ ಬಂಧನ
ಹುಬ್ಬಳ್ಳಿ: ಕೊರೋನಾ ಲಾಕ್ ಡೌನ್ ನಿಯಮಗಳನ್ನ ಸಡಿಲಗೊಳ್ಳುತ್ತಿದಂತೆ ಮೊದಲು ನಡೆಯುತ್ತಿದ್ದ ದಂಧೆಗಳು ಮತ್ತೆ ಆರಂಭಗೊಂಡಿವೆ. ಗೋವಾಗೆ ಹೋಗಿ ಬರಲು ಅವಕಾಶ ಕೊಟ್ಟಿದ್ದೇ ತಡ, ಗೋವಾ ಡ್ರಿಂಕ್ ನಗರದೊಳಗೆ ಬರಲಾರಂಭಿಸಿದೆ.
ಗೋವಾದಿಂದ ಮಹೇಂದ್ರ ಬೊಲೇರೋ ವಾಹನದಲ್ಲಿ ತರುತ್ತಿದ್ದ 18 ಲೀಟರ್ ಬಾಟಲಿಗಳನ್ನ ವಶಕ್ಕೆ ಪಡೆಯಲಾಗಿದೆ. ಅಬಕಾರಿ ಇನ್ಸ್ ಪೆಕ್ಟರ್ ಸಂಜೀವರೆಡ್ಡಿ, ಸಿಬ್ಬಂದಿಗಳಾದ ಜಾನ್ ವರ್ಗೀಸ್, ಪಿ.ವೈ.ಮುಳಗುಂದ, ಎನ್.ಎಂ.ಶೇಖ ದಾಳಿಯನ್ನ ಮಾಡಿ, ಆರೋಪಿಗಳು ಬಂಧಿಸಿದ್ದಾರೆ.
ಗೋವಾದಿಂದ ತಂದ ಮದ್ಯವನ್ನ ದಾವಣಗೆರೆಯ ಎಂ.ಗುರುಮೂರ್ತಿ ಹಾಗೂ ಮುಂಡರಗಿಯ ಆನಂದ ಬಳಗೇರ ಬೇರೆಡೆ ಸಾಗಾಟ ಮಾಡುತ್ತಿದ್ದಾಗ ಗಬ್ಬೂರ ಬೈಪಾಸ್ ಬಳಿ, ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ.