Posts Slider

Karnataka Voice

Latest Kannada News

ದೇವ’ದುರ್ಗ ‘ವೃದ್ಧ’ನಲ್ಲಿ ‘ದೇವರು’ ಕಂಡ ಯುವಕರು: ನಮ್ಮ ನಡುವೆ ಇಂತವರು ಇದ್ದಾರೆ..

1 min read
Spread the love

ರಾಯಚೂರು: ಆ ಯುವಕರು ಎಲ್ಲರಂತೆ ಧಿಮಾಕು ತೋರಿಸುತ್ತ ಜೀವನ ನಡೆಸಬೇಕಿತ್ತು. ಅವರು ಎಲ್ಲರೊಂದಿಗೂ ಸ್ಟೈಲ್ ನಲ್ಲಿ ಕ್ಷಣಗಳನ್ನ ಕಳೆಯಬೇಕಾದವರು. ಆದರೆ, ಅವರು ಹಾಗೇ ಮಾಡಲಿಲ್ಲ. ಬೀದಿಯಲ್ಲಿದ್ದವರ ಬದುಕಿಗೆ ಆಸರೆಯಾಗಲು ಹೊರಟಿದ್ದಾರೆ.. ಎಲ್ಲಿ ಅಂತೀರಾ ಈ ವರದಿಯನ್ನ ಪೂರ್ಣವಾಗಿ ಓದಿ..

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅರಕೇರ ಗ್ರಾಮದ ಕೆಂಚಣ್ಣ ಮತ್ತು ಹನಮಂತ ಗಾಲಿ ಮಾಡಿದ ಕೆಲಸ ಎಲ್ಲರೂ ಗೌರವಿಸುವಂತೆ ಮಾಡಿದೆ. ಅನಾರೋಗ್ಯದಿಂದ ಹಲವು ದಿನಗಳಿಂದ ಅರಕೇರಿಯ ರಸ್ತೆಯಲ್ಲಿಯೇ ಇರುತ್ತಿದ್ದ ವೃದ್ಧನಿಗೆ ಹೊಸ ರೂಪವನ್ನ ಕೊಟ್ಟಿದ್ದಾರೆ.

ತಾವೇ ಮುಂದೆ ನಿಂತು ಆತನಿಗೆ ಸ್ನಾನ ಮಾಡಿಸಿ, ಹೊಸ ಬಟ್ಟೆ ಕೊಡಿಸಿ, ಆತನಲ್ಲಿ ದೇವರನ್ನ ಕಂಡಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ನಾರಯಣಗೌಡ ಬಣದಲ್ಲಿರುವ ಯುವಕ ಕಾರ್ಯವನ್ನ ಪ್ರತಿಯೊಬ್ಬರು ಪ್ರಶಂಸಿದ್ದಾರೆ.

ಊಟವಿಲ್ಲದೇ ಪರದಾಡುತ್ತಿದ್ದ ವೃದ್ಧನಿಗೆ ಊಟವನ್ನ ಒದಗಿಸಿದ್ದಾರೆ. ಅಷ್ಟೇ ಅಲ್ಲ, ಯಾವತ್ತೂ ತೊಂದರೆಯಾಗಬಾರದೆಂದು ವ್ಯವಸ್ಥೆಯನ್ನ ಮಾಡಿಕೊಟ್ಟಿದ್ದಾರೆ. ಇಂತಹ ಯುವಕರ ಸಂಖ್ಯೆ ಎಲ್ಲ ಕಡೆಯೂ ಹೆಚ್ಚಾಗಬೇಕಿದೆ.


Spread the love

Leave a Reply

Your email address will not be published. Required fields are marked *