ರಾಯಚೂರು ಜಿಲ್ಲೆಯಲ್ಲಿ ಗಾಂಜಾ ಘಮಟು: ಎರಡು ದಾಳಿ-22 ಕೆಜಿ ಗಾಂಜಾ ವಶ

ರಾಯಚೂರು: ರಾಜ್ಯದ ಹಲವೆಡೆ ನಡೆಯುತ್ತಿರುವ ಮಾದಕ ದ್ರವ್ಯಗಳ ದಾಳಿಗಳು ಮುಂದುವರೆದಿದ್ದು, ಅದೀಗ ಬಿಸಿಲನಾಡು ರಾಯಚೂರಲ್ಲಿಯೂ ಕಾಣುತ್ತಿದೆ. ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 22 ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ.
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಮರಟ ಗ್ರಾಮದಲ್ಲಿ 10ಕೆಜಿ ಹಸಿ ಗಾಂಜಾ ಬೆಳೆದಿದ್ದ ಹನುಮಂತಪ್ಪ ನಾಯಕನನ್ನ ಗಾಂಜಾ ಸಮೇತ ವಶಕ್ಕೆ ಪಡೆಯಲಾಗಿದೆ.
ಸೀಮೆ ಹೊಲದಲ್ಲಿ 10ಕೆಜಿ ಗಾಂಜಾವನ್ನ ಮೆಣಸಿನಕಾಯಿ ಗಿಡಗಳ ಮಧ್ಯೆ ಬೆಳೆದಿದ್ದನ್ನ ಮಾಹಿತಿಯ ಮೇರೆಗೆ ದಾಳಿ ನಡೆಸಲಾಗಿತ್ತು.
ಮತ್ತೊಂದು ಪ್ರಕರಣವೂ ರಾಯಚೂರು ಜಿಲ್ಲೆಯ ಮುದಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, 12 ಕೆಜಿ ಗಾಂಜಾ ಸಮೇತ ಬೆಳೆಗಾರನನ್ನ ಬಂಧನ ಮಾಡಲಾಗಿದೆ.