ರಾಯಚೂರಲ್ಲಿ ಪುಂಡಾಟ: ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾದ ಬೈಕ್-ಗಾಡಿಗಳು
1 min readರಾಯಚೂರು: ಗಣೇಶ ವಿಸರ್ಜನೆ ಸಮಯದಲ್ಲಿ ಧ್ವನಿವರ್ಧಕ ಹಚ್ಚಲು ಅವಕಾಶ ನೀಡಲಿಲ್ಲ ಎಂದು ಆಕ್ರೋಶಗೊಂಡ ಯುವಕರ ಗುಂಪೊಂದು ರಾತ್ರೋರಾತ್ರಿ ಗಲಾಟೆ ಮಾಡಿ, ಕಣ್ಣಿಗೆ ಬಿದ್ದ ಬೈಕ್, ಸ್ಕೂಟರ, ತಳ್ಳು ಗಾಡಿಗಳನ್ನ ಎಲ್ಲೆಂದರಲ್ಲಿ ದೂಡಿದ ಘಟನೆ ರಾಯಚೂರಿನ ಬಂಗೀಕುಂಟದಲ್ಲಿ ನಡೆದಿದೆ.
ಸರಕಾರದ ಆದೇಶ ಪಾಲನೆ ಮಾಡುವುದಾಗಿ ಬರೆದುಕೊಟ್ಟ ನಂತರವೇ ಸಾರ್ವಜನಿಕ ಗಣೇಶೋತ್ಸವ ಮಾಡಲು ಅವಕಾಶ ನೀಡಿದ್ದನ್ನ ನಿಭಾಯಿಸದೇ ಧ್ವನಿವರ್ಧಕ ಹಚ್ಚಲು ಮುಂದಾಗಿದ್ದರು. ಇದಕ್ಕೆ ಪೊಲೀಸರು ಅಡ್ಡಿಪಡಿಸಿದ್ದರಿಂದ ಕೆಲವು ಪುಂಡರು ಗಲಾಟೆ ಮಾಡಲು ಆರಂಭಿಸಿದ್ದಾರೆ.
ಇಡೀ ಪ್ರದೇಶದಲ್ಲಿ ಯುವಕರ ಮಾಡಿದ ದಾಂಧಲೆ ಮಾಡಿರುವ ಕುರುಹುಗಳು ಎಲ್ಲೆಂದರಲ್ಲಿ ಬಿದ್ದಿವೆ. ಬೈಕ್ ಗಳು ಗಟಾರದಲ್ಲಿ ಹಾಕಲಾಗಿದೆ. ತಳ್ಳುವ ಗಾಡಿಗಳು ರಸ್ತೆಗುಂಟಕ್ಕೂ ಬಿದ್ದಿವೆ. ಇಡೀ ರಸ್ತೆಯಲ್ಲಿ ವಾಹನಗಳು ಬಿದ್ದಿದ್ದರಿಂದ ಕೆಲಕಾಲ ಪ್ರದೇಶದಲ್ಲಿ ತ್ವೇಷಮಯ ವಾತಾವರಣ ಉಂಟಾಗಿತ್ತು.
ಘಟನಾ ಸ್ಥಳಕ್ಕೆ ಸದರಸೋಪಾ ಠಾಣೆ ಪೊಲೀಸರು ಭೇಟಿ ನೀಡಿ, ಪರಿಸ್ಥಿತಿಯನ್ನ ಹತೋಟಿಗೆ ತರಲಾಗಿದ್ದು, ಗಲಾಟೆ ಮಾಡಿದ ಪುಂಡರು ರಾತ್ರೋರಾತ್ರಿ ಪರಾರಿಯಾಗಿದ್ದು, ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ.