ರಾಯಚೂರಲ್ಲಿ ಡಿಗ್ರಿ ಕಾಲೇಜಿನಲ್ಲಿ ಗದ್ದಲವೋ ಗದ್ದಲ: ಏನ್ ಪರಿಸ್ಥಿತಿ ಬಂತ್ರೀಪಾ ಇದ್..
1 min readರಾಯಚೂರು: ಪಿಯುಸಿ ಪರೀಕ್ಷೆ ಫಲಿತಾಂಶ ಹೊರ ಬರುತ್ತಿದ್ದಂತೆ ಡಿಗ್ರಿ ಕಾಲೇಜಿನ ಪ್ರವೇಶಕ್ಕಾಗಿ ನೂಕುನುಗ್ಗಲು ಆರಂಭಗೊಂಡಿದೆ. ಪ್ರಥಮ ವರ್ಷದ ಡಿಗ್ರಿಗಾಗಿ ಯಾವುದೇ ಸೋಷಿಯಲ್ ಡಿಸ್ಟನ್ಸ್ ಇಲ್ಲದೇ ಪ್ರವೇಶಕ್ಕಾಗಿ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ನಗರದ ಸರಕಾರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂದೆ ವಿದ್ಯಾರ್ಥಿಗಳು, ಪ್ರಥಮ ವರ್ಷದ ಪದವಿ ಅಡ್ಮಿಷನ್ ಪಡೆಯಲು ಬಂದಿದ್ದು, ಲಾಕ್ ಡೌನ್ ನಿಯಮಗಳು ಸಡಿಲ ಗೊಳ್ಳುತ್ತಿದ್ದಂತ್ತೆ ಸಾಮಾಜಿಕ ಅಂತರ ಮರೆತಿದ್ದಾರೆ. ವಿದ್ಯಾರ್ಥಿ – ವಿದ್ಯಾರ್ಥಿನಿಯರು ಎನ್ನದೆ ಕಾಲೇಜು ಗೇಟಿನ ಒಳಗಡೆ ವಿದ್ಯಾರ್ಥಿಗಳು ನುಗ್ಗುತ್ತಿರುವುದು ಸಾಮಾನ್ಯವಾಗಿದೆ.
ಜಿಲ್ಲೆಯಲ್ಲಿ ಪ್ರತಿದಿನವೂ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಅಂತಹದರಲ್ಲಿ ಕಾಲೇಜಿನ ಪ್ರಾಂಶುಪಾಲರು ಯಾವುದೇ ಕ್ರಮಕ್ಕೆ ಮುಂದಾಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪಿಯುಸಿ ವಿದ್ಯಾರ್ಥಿಗಳು ಕೂಡಾ ತಮ್ಮ ಆರೋಗ್ಯದ ಬಗ್ಗೆ ಗಮನ ನೀಡದೇ ಇರುವುದು ಸಹ ಸರಿಯಲ್ಲ ಎಂಬುದು ಪ್ರಜ್ಞಾವಂತರ ಅಂಬೋಣ.