ರಾಯಚೂರು ಪೊಲೀಸರ ಭರ್ಜರಿ ಕಾರ್ಯಾಚರಣೆ-349 ಕೇಸ್
ರಾಯಚೂರು: ಜಿಲ್ಲೆಯಲ್ಲಿ ನಾಲ್ಕನೇಯ ದಿನದ ಲಾಕ್ಡೌನ್ ಆರಂಭವಾಗಿದ್ದರೂ ಸಾರ್ವಜನಿಕರು ಸುಖಾಸುಮ್ಮನೆ ಅಲೆದಾಡುವುದನ್ನ ಬಿಡುತ್ತಿಲ್ಲ. ಹೀಗಾಗಿಯೇ ಪೊಲೀಸರು ನಿರಂತರವಾಗಿ ಎಚ್ಚರಿಸಲು ಪ್ರಕರಣ ದಾಖಲು ಮಾಡುತ್ತಲೇ ಇದ್ದಾರೆ.
ಪೊಲೀಸರು ಕಾರ್ಯಚರಣೆ ನಡೆಸಿ ಲಾಕ್ ಡೌನ್ ನಿಯಮ ಉಲ್ಲಂಘಿಸಿದವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಹಲವು ಕಾರ್ , ಆಟೊ, ಬೈಕ್ ಸೇರಿದಂತೆ ಮಾಸ್ಕ್ ದರಿಸದರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಒಟ್ಟು 349 ಪ್ರಕರಣಗಳು ದಾಖಲಿಸಿ 67500 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಇಂದು ಕೂಡಾ ಕಾರ್ಯಾಚರಣೆ ಮುಂದುವರೆದಿದೆ.