ರಾಯಚೂರು ಪೊಲೀಸರಿಗೆ ಬಿಡಾಡಿ ದನಗಳು- ಲಾಕ್ ಡೌನ್ ಉಲ್ಲಂಘನೆ ಮಾಡೋರಿಂದ ಕಿರಿಕಿರಿ
1 min readರಾಯಚೂರು: ಲಾಕ್ ಡೌನ್ ನಲ್ಲಿ ಜನ ಸಂಚಾರದ ಜೊತೆಗೆ ಜಾನುವಾರುಗಳ ಸಂಚಾರವನ್ನೂ ಕಂಟ್ರೋಲ್ ಮಾಡುವ ಪರಿಸ್ಥಿತಿ ಪೊಲೀಸರಿಗೆ ಒದಗಿ ಬಂದಿದೆ.
ರಸ್ತೆ ಮದ್ಯದಲ್ಲಿ ಸಂಚರಿಸಿ, ಮಲಗಿ ಲಾಕ್ ಡೌನ್ ಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಮೂವತ್ನಾಲ್ಕು ಆಕಳುಗಳನ್ನ ಪೊಲೀಸರೇ ಗೋ ಶಾಲೆಗೆ ರವಾನೆ ಮಾಡಿದ್ದಾರೆ. ಈ ಹಿಂದೆಯೂ ರಸ್ತೆಗಳಲ್ಲಿ ಮಲಗಿದ್ದ ಗೋವುಗಳನ್ನು ಹಿಡಿದು ಅವುಗಳ ಮಾಲೀಕರಿಗೆ ದಂಡ ಹಾಕಲಾಗಿತ್ತು.
ಒಂದು ಕಡೆ ಜಾನುವಾರಗಳ ಕಿರಿಕಿರಿಯಾದರೇ ಎಲ್ಲಾ ವ್ಯಾಪಾರ ವಹಿವಾಟು ಬಂದಿದ್ದರು ಜನ ರಸ್ತೆಗಿಳಿದಿದ್ದಾರೆ. ಲಾಕ್ ಡೌನ್ ಉಲ್ಲಂಘನೆ ಮಾಡಿದ ಬೈಕ್, ಕಾರ್ , ಆಟೋಗಳ ವಶಕ್ಕೆ ಪಡೆಯಲಾಗಿದ್ದು, ಸುಮಾರು 242 ಪ್ರಕರಣ ದಾಖಲಿಸಿ ಎಪ್ಪತ್ತು ಸಾವಿರ ದಂಡ ವಸೂಲಿ ಮಾಡಿದ್ದಾರೆ. ಮಾಸ್ಕ್ ಧರಿಸದೆ ಸಂಚರಿಸಿದವರಿಗೂ ದಂಡ ವಿಧಿಸಲಾಗಿದ್ದು 34 ಸಾವಿರ ರೂಪಾಯಿ ವಸೂಲಿ ಮಾಡಲಾಗಿದೆ.