ರಾಯಚೂರು: ಸ್ಟೇರಿಂಗ್ ಕಟ್-ಲಾರಿ ಪಲ್ಟಿ- ಇಬ್ಬರ ದುರ್ಮರಣ

ರಾಯಚೂರು: ವೇಗವಾಗಿ ಹೋಗುತ್ತಿದ್ದಾಗ ಮಿನಿಲಾರಿಯ ಸ್ಟೇರಿಂಗ್ ಕಟ್ ಆದ ಪರಿಣಾಮ ಲಾರಿಯೂ ಪಲ್ಟಿಯಾಗಿದ್ದು, ವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕುರ್ಡಿ ಕ್ರಾಸ್ ಬಳಿ ಸಂಭವಿಸಿದೆ.
ವೇಗವಾಗಿ ಹೊರಟ ಸಮಯದಲ್ಲೇ ಸ್ಟೇರಿಂಗ್ ಕಟ್ ಆಗಿದೆ. ಯಾವುದೇ ರೀತಿಯಾಗಿ ನಿಯಂತ್ರಣಕ್ಕೆ ಸಿಗದ ಕಾರಣ ಲಾರಿಯೂ ರಸ್ತೆಯಲ್ಲಿಯೇ ಪಲ್ಟಿಯಾಗಿದೆ. ಲಾರಿಯಲ್ಲಿ ಮೂವರಿದ್ದು, ಅದರಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಲಾರಿಯು ರಸ್ತೆ ಮಧ್ಯದಲ್ಲೇ ಪಲ್ಟಿಯಾಗಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಕೆಲ ಸಮಯದ ನಂತರ ಕ್ರೇನ್ ಮೂಲಕ ಲಾರಿಯನ್ನ ರಸ್ತೆಯ ಪಕ್ಕಕ್ಕೆ ಸರಿಸಿದಾಗ ಸಂಚಾರ ಸುಗಮಗೊಂಡಿದೆ.