Posts Slider

Karnataka Voice

Latest Kannada News

ಧಾರವಾಡದಲ್ಲಿ ಪ್ರತಿಭಾವಂತ ರಾಹುಲ ಸಂಕನೂರ- ಮೊಬೈಲ್ ನಿಂದ ದೂರವಿರಲು ವಿದ್ಯಾರ್ಥಿಗಳಿಗೆ ಕರೆ…!

1 min read
Spread the love

ಧಾರವಾಡ: ನಗರದ ಹಳಿಯಾಳ ರಸ್ತೆಯಲ್ಲಿರುವ ಐ.ಸಿ.ಎಸ್. ಮಹೇಶ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ‘ ಸಾಧಕರೊಂದಿಗೆ ಸಂವಾದ ’ಎಂಬ ಆನ್ ಲೈನ್ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ 2019ರ ಯು ಪಿ ಎಸ್ ಸಿ ಪರೀಕ್ಷೆಯಲ್ಲಿ ದೇಶಕ್ಕೆ 17ನೇ rank ಹಾಗೂ ಕರ್ನಾಟಕಕ್ಕೆ ಮೊದಲ rank ಪಡೆದ ರಾಹುಲ ಸಂಕನೂರ, ಯು ಪಿ ಎಸ್ ಸಿ ಪರೀಕ್ಷೆ ಕೆ.ಪಿ.ಎಸ್.ಸಿ ಸೇರಿದಂತೆ ಸ್ಪರ್ಧಾತ್ಮಕ &ias ಪರೀಕ್ಷೆಗಳನ್ನು ಎದುರಿಸುವ ಕ್ರಮವನ್ನು ವಿವರಿಸಿದರು. ಮೂಲತ: ಬಿ.ಇ. ಪದವಿಧರರಾಗಿರುವ ರಾಹುಲ ಸಂಕನೂರ ಅವರು ತಮ್ಮ ಇಂಜನೀಯರಿಂಗ್ ವ್ಯಾಸಂಗದ ನಂತರ ಐ ಎ ಎಸ್ ಪರೀಕ್ಷಾ ತಯಾರಿಯ ಕ್ರಮಗಳನ್ನು ಅದರಲ್ಲಿರುವ ವಿವಿಧ ಹಂತಗಳು, ಪರೀಕ್ಷಾ ಕ್ರಮ, ನಿಯಮಬದ್ದವಾದ ಶ್ರದ್ಧೆಯಿಂದ ಕೂಡಿದ ಅಧ್ಯಯನದಿಂದ ಮಾತ್ರ ಯಶಸ್ಸು ಸಾಧ್ಯ.ಪರೀಕ್ಷೆಯನ್ನು ಎದುರಿಸುವ ಯಾವುದೆ ಹಂತದಲ್ಲಿಯೂ ಎದೆಗುಂದಬಾರದು. ಧೈರ್ಯದಿಂದ ಮುನ್ನಡೆದರೆ ಮಾತ್ರ ಯಶಸ್ಸು ಸಾಧ್ಯ ಎಂದರು.

ಸ್ವತ: ಪಿ ಯು ವಿಭಾಗದಲ್ಲಿ ಮೆಡಿಕಲ್ 17ನೇ rank ಹಾಗು ಇಂಜನೀಯರಿಂಗ 31 ನೇ rank ಪಡೆದಿರುವ ರಾಹುಲ ಸಂಕನೂರವರು ಮುಂದುವರೆದು ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿ, ಕೆ ಸಿ ಇಟಿ ಹಾಗೂ ಇನ್ನಿತರ ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸುಗೊಳ್ಳಲು ಅಣುಕು ಪರೀಕ್ಷೆ ಹಾಗೂ ಶಿಕ್ಷಕರ ಜೊತೆ ನಿರಂತರ ಸಂಪರ್ಕ ಅವಶ್ಯಕ. ವಿದ್ಯಾರ್ಥಿಗಳಿಗೆ ಪಿ ಯು ಪರೀಕ್ಷೆ ಅತ್ಯಂತ ಮಹತ್ವ ಪೂರ್ಣವಾದದ್ದು ಅವರ ಮುಂದಿನ ಆರು ವರ್ಷಗಳು ಜೀವನದ ಭದ್ರ ಬುನಾದಿ ಹಾಕುತ್ತವೆ. ಎಂದರು. ಏಕಾಗ್ರತೆ, ಶ್ರದ್ಧೆ, ನಿಯಮ ಪಾಲನೆ, ಶಿಸ್ತು, ಅತಿಯಾದ ಮೋಬೈಲ್‍ಯಿಂದ ದೂರ ಇರಬೇಕು ಕಿವಿ ಮಾತು ಹೇಳಿದರು.

ಕುಂಟುನೆಪ ಹಾಗೂ ಕಾರಣಗಳು ಭವಿಷ್ಯಕ್ಕೆ ಮಾರಕ ವಿದ್ಯಾರ್ಥಿಗಳ ಯಶಸ್ಸು ಅಡಗಿರುವುದು ಅವರ ಶಿಸ್ತುಬದ್ಧ ಜೀವನಕ್ರಮದಲ್ಲಿ ಎಂದರು. ವರ್ತಮಾನ ಪತ್ರಿಕೆಗಳು, ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಒಪ್ಪಂದ ಪಾಲಿಸಿಗಳ ಮಾಹಿತಿ, ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸಹಕಾರಿಯಗುತ್ತವೆ ಎಂದು ವಿದ್ಯಾರ್ಥಿಗಳು ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು. ಅವರ ಸಂದರ್ಶನ ಸುಮಾರು ಎರಡು ಗಂಟೆಗಳ ಕಾಲ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಉಮೇಶ ಪುರೋಹಿತ ಮಾತನಾಡಿ, ಯಶಸ್ಸಿಗೆ ಆತ್ಮ ವಿಶ್ವಾಸ ಅತಿ ಮುಖ್ಯ. ಆತ್ಮವಿಶ್ವಾಸದಿಂದ ಕೂಡಿದ ಅಧ್ಯಯನ ಯಶಸ್ಸಿಗೆ ಪೂರಕ ಎಂದರು. ವೇದಿಕೆಯ ಮೇಲೆ ಉಪಪ್ರಾಚಾರ್ಯ ಮಹಾಲಿಂಗ ಕಮತಗಿ, ಐ ಸಿ ಎಸ್ ಸ್ಫರ್ಧಾತ್ಮಕ ಪರೀಕ್ಷಾ ಕೇಂದ್ರ ಮುಖ್ಯ ಆಡಳಿತಾಧಿಕಾರಿ ಮುರಳಿಧರ ಹೆಗಡೆ ಇದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಬಸವರಾಜ ರೇವಡಿಗಾರ, ಗೌರಿ ಜೋಷಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಆನ್‍ಲೈನ್‍ನಲ್ಲಿ ಕಾರ್ಯಕ್ರಮವನ್ನು ವೀಕ್ಷಿಸಿ ತಮ್ಮ ಸಂಶಯವನ್ನು ಪ್ರಶ್ನೋತ್ತರ ಮಾಲಿಕೆಯಲ್ಲಿ ಪ್ರಶ್ನೆ ಕೇಳುವುದರ ಮುಖಾಂತರ ರಾಹುಲ ಸಂಕನೂರ ಅವರಿಂದ ಉತ್ತರ ಪಡೆದು ಸಂತಸ ಪಟ್ಟರು. ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗ ಭಾಗವಹಿಸಿದ್ದರು. ಮಮತಾ ಕಳಿಹೊಳಿ ಪರಿಚಯಿಸಿ ಸ್ವಾಗತಿಸಿದರು. ಅರ್ಪಿತಾ ಹುದ್ದಾರ ನಿರೂಪಿಸಿದರು. ಜಯರಾಜ್ ಹೆಗಡೆ ವಂದಿಸಿದರು.


Spread the love

Leave a Reply

Your email address will not be published. Required fields are marked *