ಕ್ವಾರಂಟೈನ್ ಮತ್ತೆ ಹದಿನಾಲ್ಕು ದಿನಕ್ಕೆ: ಮಹಾರಾಷ್ಟ್ರದಿಂದ ಬಂದವರಿಗೆ ಸಾಂಸ್ಥಿಕ ಕ್ವಾರಂಟೈನ್
ಬೆಂಗಳೂರು: ಏಳು ದಿನಗಳವರೆಗೆ ನಿಗದಿ ಮಾಡಿದ್ದ ಕ್ವಾರಂಟೈನ್ ನಿಯಮವನ್ನ ಮತ್ತೆ ಸರಕಾರ ಬದಲಿಸಿ ಆದೇಶ ಹೊರಡಿಸಿದೆ.
ಅನ್ಯ ರಾಜ್ಯಗಳಿಂದ ರಾಜ್ಯಕ್ಕೆ ಬರೋರಿಗೆ ಇನ್ಮುಂದೆ 14 ದಿನ ಕಡ್ಡಾಯ ಹೋಂ ಕ್ವಾರಂಟೈನ್ ಮಾಡಲು ನಿರ್ದೇಶನ ನೀಡಲಾಗಿದೆ.
ಮಹಾರಾಷ್ಟ್ರ ಸೇರಿದಂತೆ ಎಲ್ಲ ರಾಜ್ಯಗಳಿಂದ ಬರೋರಿಗೂ 14 ದಿನ ಹೋಂ ಕ್ವಾರಂಟೈನ್ ಅನ್ವಯವಾಗಲಿದ್ದು, ಈವರೆಗೆ ಮಹಾರಾಷ್ಟ್ರದಿಂದ ಬರೋರಿಗೆ 7 ದಿನ ಸಾಂಸ್ಥಿಕ ಕ್ವಾರಂಟೈನ್ ಮತ್ತು 7 ದಿನ ಹೋಂ ಕ್ವಾರಂಟೈನ್ ಇತ್ತು. ಉಳಿದ ರಾಜ್ಯಗಳಿಂದ ಬರೋರಿಗೆ 14 ದಿನ ಹೋಂ ಕ್ವಾರಂಟೈನ್ ಇತ್ತು. ಮಹಾರಾಷ್ಟ್ರದಿಂದ ಬರೋರಿಗೆ ಇದ್ದ ಸಾಂಸ್ಥಿಕ ಕ್ವಾರಂಟೈನ್ ರದ್ದುಪಡಿಸಲಾಗಿದ್ದು, ಮಹಾರಾಷ್ಟ್ರದಿಂದ ಬರೋರಿಗೆ ಇನ್ಮುಂದೆ ಹೋಂ ಕ್ವಾರಂಟೈನ್ ಮಾತ್ರ ನಿಗದಿಪಡಿಸಲಾಗಿದೆ.
ಸರಕಾರದ ಈ ಆದೇಶವನ್ನ ಎಲ್ಲ ಜಿಲ್ಲಾಧಿಕಾರಿಗಳಿಗೆ ರವಾನೆ ಮಾಡಲಾಗಿದ್ದು, ಇನ್ಮುಂದೆ ಈ ಥರ ಜನತೆ ಪಾಲಿಸಬೇಕಿದೆ.