ಸಚಿವರೇ ದೈಹಿಕ ಶಿಕ್ಷಣದ ಬಗ್ಗೆ ಒಂದು ಕ್ಲಾರಿಟಿ ಕೊಡ್ತೀರಾ.. ಅಸ್ತಿತ್ವದ್ದೇ ಸಮಸ್ಯೆ..!

ಬೆಂಗಳೂರು: ಸರಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಮತ್ತೂ ಶಿಕ್ಷಕರ ಬಗ್ಗೆ ರಾಜ್ಯದ ಶಿಕ್ಷಣ ಇಲಾಖೆ ಸ್ಪಷ್ಟವಾದ ನಿರ್ಧಾರಕ್ಕೆ ಬಾರದೇ ಇರುವುದು ಹಲವು ಗೊಂದಲಗಳಿಗೆ ಕಾರಣವಾಗುತ್ತಿದೆ. ಹೀಗಾಗಿ, ಶಿಕ್ಷಣ ಸಚಿವರು ಇದನ್ನ ನೋಡಲೇಬೇಕಾದ ಅನಿವಾರ್ಯತೆ ಬಂದೋದಗಿದೆ.
ರಾಜ್ಯದ ಪ್ರತಿಯೊಂದು ಶಾಲೆ-ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ನೀಡಬೇಕೆಂದು ಸರಕಾರವೇ ಬಯಸುತ್ತಿದೆ. ಆದರೆ, ಸರಕಾರದ ತೀರ್ಮಾನಗಳು ಹಲವು ರೀತಿಯಲ್ಲಿ ಬದಲಾಗುತ್ತಲೇ ಇರುತ್ತವೆ. ಈ ಕಾರಣದಿಂದ ದೈಹಿಕ ಶಿಕ್ಷಣ ಶಿಕ್ಷಕರ ಸ್ಥಿತಿ, ಪ್ರತಿವರ್ಷವೂ ಒಂದಿಲ್ಲಾ ಒಂದು ತೊಂದರೆಯನ್ನ ಎದುರಿಸುವಂತಾಗಿದೆ.

ಪಠ್ಯದ ಜೊತೆಗೆ ದೈಹಿಕ ಶಿಕ್ಷಣದ ಮಹತ್ವವನ್ನ ಸಾರಿಕೊಂಡು ಬಂದಿದ್ದು ಸರಕಾರವೇ. ಆದ್ರೆ, ವಿದ್ಯಾರ್ಥಿಗಳ ಆದಾರದ ಮೇಲೆ ದೈಹಿಕ ಶಿಕ್ಷಕರನ್ನೂ ಬೇರೆ ಕಡೆ ವರ್ಗಾವಣೆ ಮಾಡಲಾಗುತ್ತದೆ. ಮೈದಾನವಿದ್ದರೂ ಮಕ್ಕಳ ಸಂಖ್ಯೆ ಕಡಿಮೆಯಿದೆ ಎಂದು ಮೈದಾನವಿಲ್ಲದ ಶಾಲೆಗೆ ವರ್ಗಾವಣೆ ಮಾಡುತ್ತಾರೆ. ಹೆಚ್ಚುವರಿ ಮಾಡುವ ಸಮಯದಲ್ಲೂ ದೈಹಿಕ ಶಿಕ್ಷಕರನ್ನೂ ಹೆಚ್ಚುವರಿ ಮಾಡುತ್ತಾರೆ. ಸರಕಾರದ ಅಧಿಕಾರಿಗಳ ಗೊಂದಲ ಯಾಕೆ ಸೃಷ್ಟಿಸುತ್ತಾರೆ ಎಂಬುದನ್ನ ಸಚಿವರು ಅರಿತುಕೊಳ್ಳಬೇಕಿದೆ.
ಸರಕಾರ ಇಂತಹ ಆದೇಶಗಳನ್ನುಮಾಡುತ್ತದೆ. ಆದರೆ, ಎಲ್ಲ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರೇ ಇಲ್ಲಾ. ಇದರೊಂದಿಗೆ ಇದ್ದ ದೈ.ಶಿ. ಶಿಕ್ಷಕರನ್ನು ಒಂದಿಲ್ಲಾ ಒಂದು ಕಾರಣದಿಂದ ಶಾಲೆಯಿಂದ ಶಾಲೆಗೆ ಓಡಾಟ. 2008 ರಲ್ಲಿ 400, 500 ಮಕ್ಕಳಿದ್ದರೂ ಮೈದಾನವಿಲ್ಲ ಎಂದು ಅತ್ಯಂತ ಕಡಿಮೆ ಮಕ್ಕಳಿರುವ ಶಾಲೆಗೆ ವರ್ಗಾವಣೆ ಮಾಡಿದ್ರು. 2018-19 ರಲ್ಲಿ ಬೇಕಾದಷ್ಟು ವಿಶಾಲವಾದ ಮೈದಾನ ಇದ್ದರೂ ಮಕ್ಕಳ ಸಂಖ್ಯೆ ಕಡಿಮೆ ಎಂದು ಮೈದಾನವೇ ಇಲ್ಲದ ಶಾಲೆಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರನ್ನ ವರ್ಗಾಯಿಸಿದರು. ಈಗ ಟೇಲಿಕಾನ್ರ್ಫಸ್ ಮುಖಾಂತರ 250 ಕ್ಕಿಂತ ಹೆಚ್ಚು ಮಕ್ಕಳಿರುವ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಸೃಷ್ಟಿಸಿ ಅಂತ ಅಧಿಕಾರಿಗಳ ಆದೇಶ. ಇವೆಲ್ಲವುಗಳ ಮಧ್ಯ ದೈಹಿಕ ಶಿಕ್ಷಣ ಶಿಕ್ಷಕರಿಗೆ ನೆಲೆ ಇಲ್ಲವಾಗಿದೆ.
ಇಡೀ ರಾಜ್ಯಾಧ್ಯಂತ ಖಾಯಂ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕರು ಇಲ್ಲ. ಕನಿಷ್ಠ 70% ತಾಲೂಕಿನ ದೈಹಿಕ ಶಿಕ್ಷಣ ಪರಿವೀಕ್ಷಕರು ಇಲ್ಲದಿರುವುದು ಕೂಡಾ ಸರಕಾರದ ಗಮನಕ್ಕೆ ಬಾರದಿರುವುದು ಸೋಜಿಗ ಮೂಡಿಸಿದೆ.