ಗಂಡನ ಹತ್ಯೆ ಹಿಂದಿನ ಸತ್ಯಕ್ಕಾಗಿ ಕಣ್ಣೀರಿಟ್ಟಿದ್ದ “ಪುಷ್ಪಾ”- ‘ದೀಪ’ಕನಲ್ಲಿ ಲೀನ….
1 min readಹುಬ್ಬಳ್ಳಿ: ತನ್ನ ಗಂಡನ ಹತ್ಯೆಯ ಆರೋಪಿಗಳ ಜೊತೆ ಪೊಲೀಸರು ಶಾಮೀಲಾಗಿದ್ದಾರೆ. ಹಳೇಹುಬ್ಬಳ್ಳಿ ಠಾಣೆ ಪೊಲೀಸರನ್ನ ನಾವು ನಂಬೋದಿಲ್ಲ. ನನ್ನ ಪತಿಯ ಹತ್ಯೆಯ ತನಿಖೆಯನ್ನ ಸಿಓಡಿಗೆ ಕೊಡಿ ಎಂದು ರೋಧಿಸುತ್ತಲೇ ನುಡಿದಿದ್ದ ಪುಷ್ಪಾ ನೇಣಿಗೆ ಶರಣಾಗಿದ್ದು, ಪ್ರಕರಣದ ದಿಕ್ಕನ್ನೇ ಬದಲಿಸಿದೆ.
ಪ್ರಕರಣದ ಬಗ್ಗೆ ಈಗ ನಡೆದಿರುವ ವಿದ್ಯಮಾನಗಳ ಜೊತೆಗೆ ಕಳೆದ ಹದಿನೈದು ದಿನಗಳ ಹಿಂದಷ್ಟೇ ತನ್ನೆರಡು ಪುಟ್ಟ ಕಂದಮ್ಮಗಳ ಸಮ್ಮುಖದಲ್ಲಿ ಪುಷ್ಪಾ ದೀಪಕ ಪಟಧಾರಿ ಮಾತನಾಡಿರುವ ವೀಡಿಯೋ ಇಲ್ಲಿದೆ ನೋಡಿ…
ಇಷ್ಟೊಂದು ದಿಟ್ಟೆಯಾಗಿದ್ದ ಪುಷ್ಪಾ ಯಾವ ಕಾರಣಕ್ಕೆ ನವನಗರದ ಮನೆಯಲ್ಲಿ ನೇಣು ಬಿಗಿದುಕೊಂಡರು ಎಂಬ ಪ್ರಶ್ನೆ ಎಲ್ಲರನ್ನ ಕಾಡುತ್ತಿದೆ. ಗಂಗಿವಾಳ ಗ್ರಾಮ ಪಂಚಾಯತಿ ಸದಸ್ಯ ದೀಪಕ ಪಟಧಾರಿಯ ಹತ್ಯೆಯ ಹಿಂದಿನ ರಹಸ್ಯಗಳನ್ನ ಭೇದಿಸುವ ಮುನ್ನವೇ ಆಕೆಯ ಸಾವು ಹೊಸ ನಾಂದಿ ಹಾಡಲಿದೇಯಾ ಎಂಬ ಪ್ರಶ್ನೆ ಮೂಡಿಸಿದೆ.