Posts Slider

Karnataka Voice

Latest Kannada News

ಪುಣೆಯಲ್ಲಿ ಇಂದಿನಿಂದ ನೈಟ್ ಕರ್ಪ್ಯೂ ಜಾರಿ: ಶಾಲೆ-ಕಾಲೇಜು ಬಂದ್

Spread the love

ಪುಣೆ: ಕೊರೋನಾ ಪಾಸಿಟಿವ್ ಪ್ರಕರಣಗಳು ಪುಣೆಯಲ್ಲಿ ಶನಿವಾರ 849 ಜನರಿಗೆ ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ರಾತ್ರಿ ಕರ್ಫ್ಯೂ ಹೇರಿದ್ದು, ಜನರು ಹೊರಗಡೆ ಬಂದರೇ ಕಠಿಣ ಕ್ರಮವನ್ನ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಲಾಗಿದೆ.

ಮಹಾರಾಷ್ಟ್ರ ಸರ್ಕಾರ ಹೊಸ ಮಾರ್ಗಸೂಚಿ ಜಾರಿಗೊಳಿಸಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಯಾವುದೇ ಸಾರ್ವಜನಿಕ ಸಂಚಾರಕ್ಕೆ ರಾತ್ರಿ ವೇಳೆ ಅವಕಾಶ ನೀಡುವುದಿಲ್ಲ ಎಂದು ಪುಣೆ ವಿಭಾಗೀಯ ಆಯುಕ್ತ ಸೌರಭ ರಾವ್ ತಿಳಿಸಿದ್ದಾರೆ.

ಶಾಲಾ ಕಾಲೇಜುಗಳು, ಕೋಚಿಂಗ್ ತರಗತಿಗಳು ಫೆಬ್ರವರಿ 28ರವರೆಗೆ ಬಂದ್ ಆಗಲಿವೆ. ಗ್ರಂಥಾಲಯಗಳು ತೆರೆದಿರುತ್ತವೆ. ಮದುವೆ ಮತ್ತು ಇತರ ಸಮಾರಂಭಗಳಲ್ಲಿ ಅತಿಥಿ ಗಳ ಮಿತಿ 200 ಮಾತ್ರವೇ ಆಗಿದೆ. ಹೋಟೆಲ್/ರೆಸ್ಟೋರೆಂಟ್/ಬಾರ್ ರಾತ್ರಿ 11 ಗಂಟೆಯ ವರೆಗೆ ಮಾತ್ರ ತೆರೆದಿರುತ್ತದೆ.

ರಾತ್ರಿ 11 ರ ನಂತರ ಯಾವುದೇ ಕಾರಣವಿಲ್ಲದೆ ಹೊರ ಹೋಗುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈಗಾಗಲೇ ಪುಣೆಯಲ್ಲಿ ಕೋವಿಡ್ ತಡೆಗಟ್ಟುವ ಕ್ರಮವನ್ನ ಜರುಗಿಸಲಾಗಿದೆ ಎಂಬುದನ್ನ ಸ್ಮರಿಸಿಕೊಂಡರು.


Spread the love

Leave a Reply

Your email address will not be published. Required fields are marked *