ಪಲ್ಟಿಯಾಗಲಿದ್ದ ಟ್ರ್ಯಾಕ್ಟರೂ.. ರಸ್ತೆ ದುರಸ್ತಿ ಮಾಡಿದ ಧಾರವಾಡ ಪೊಲೀಸರೂ…! ಜನಪ್ರತಿನಿಧಿಗಳೇ ನೀವೂ…
1 min readಧಾರವಾಡ: ನಗರದ ಸವದತ್ತಿ ರಸ್ತೆಯಲ್ಲಿ ಹದಗೆಟ್ಟ ರಸ್ತೆಯಿಂದ ಕಬ್ಬು ತುಂಬಿದ ಟ್ರ್ಯಾಕ್ಟರವೊಂದು ಪಲ್ಟಿಯಾಗುವ ಸನ್ನಿವೇಶದಿಂದ ಪಾರಾಗಿದ್ದು, ಜೀವ ಉಳಿಸಿಕೊಳ್ಳಲು ಟ್ರ್ಯಾಕ್ಟರನಿಂದ ಇಬ್ಬರು ಜಿಗಿದು ಸಣ್ಣಪುಟ್ಟ ಗಾಯಗಳನ್ನ ಮಾಡಿಕೊಂಡಿದ್ದು, ಸುಲಭ ಸಂಚಾರಕ್ಕೆ ಪೊಲೀಸರೇ ರಸ್ತೆ ದುರಸ್ತಿ ಮಾಡಿದ ಘಟನೆ ನಡೆದಿದೆ.
ಕಬ್ಬು ಹೇರಿಕೊಂಡು ಹೊರಟಿದ್ದ ಟ್ರ್ಯಾಕ್ಟರ್ ಹದಗೆಟ್ಟ ರಸ್ತೆಯಲ್ಲಿ ಸಡನ್ನಾಗಿ ಮುಂದಿನ ಎರಡು ಗಾಲಿಗಳು ಮೇಲಾಗಿವೆ. ಇದರಿಂದ ಗಾಬರಿಯಾದ ಚಾಲಕ ಮತ್ತು ಕಬ್ಬಿನ ಮೇಲೆ ಕುಳಿತ ಇಬ್ಬರು ಕೆಳಗೆ ಜಿಗಿದಿದ್ದಾರೆ. ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಾಗೇ ನಿಂತ ಟ್ರ್ಯಾಕ್ಟರನ್ನ ಕೆಳಗೆ ಮಾಡಲು ಹರಸಾಹ ಪಟ್ಟ ಧಾರವಾಡದ ಸಂಚಾರಿ ಠಾಣೆಯ ಪೊಲೀಸರು, ರಸ್ತೆಯನ್ನ ತಾವೇ ದುರಸ್ತಿ ಮಾಡಿ, ಸಂಚಾರವನ್ನ ಸುಲಭವಾಗುವಂತೆ ನೋಡಿಕೊಂಡಿದ್ದಾರೆ. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಗೆ ಸಲಿಕೆಯಿಂದ ಕಡಿಯನ್ನ ಹಾಕಿದ್ದರಿಂದ ಸರಳವಾಗಿ ಟ್ರ್ಯಾಕ್ಟರ್ ಸಂಚಾರ ಮಾಡಿದೆ.
ಜನಪ್ರತಿನಿಧಿಗಳು ರಸ್ತೆಯನ್ನ ದುರಸ್ತಿ ಮಾಡಿಸದೇ ಇರುವುದು ಇಂತಹ ಅವಘಡಗಳಿಗೆ ಕಾರಣವಾಗುತ್ತಿದ್ದು, ಸಂಚಾರಿ ಠಾಣೆಯ ಪೇದೆಗಳಾದ ಬಸಯ್ಯ ಸೇರಿದಂತೆ ಮತ್ತಿಬ್ಬರು ರಸ್ತೆಯನ್ನ ದುರಸ್ತಿ ಮಾಡಿ, ಸಾರ್ವಜನಿಕರಿಂದ ಶಹಬ್ಬಾಶ್ ಗಿರಿ ಪಡೆದಿದ್ದಾರೆ.