ಮುಂಗಾರು ಮಳೆಯಲ್ಲೂ ಹಿಂಗಾರಿನ ಬೆಳೆ ತೆಗೆದ ಮಗ: ಊರಿಗೂರೇ ಸಂಭ್ರಮದಲ್ಲಿ
ವಿಜಯಪುರ: ದ್ವಿತೀಯ ಪಿಯುಸಿ ಫಲಿತಾಂಶ ಬಂದಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ವಿಜಯಪುರ ಕೊನೆಯ ಸ್ಥಾನದಲ್ಲಿದ್ರೂ, ಜಿಲ್ಲೆಯ ವಿದ್ಯಾರ್ಥಿ ರಾಜ್ಯಕ್ಕೆ 9ನೇ ರ‌್ಯಾಂಕ್ ಹಾಗೂ ಜಿಲ್ಲೆಗೆ ಪ್ರಥಮ ರ‌್ಯಾಂಕ್ ಹಂಚಿಕೊಂಡಿದ್ದಾನೆ. ಈ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಈ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಜ್ಞಾನ ಭಾರತಿ ಪಿಯು ಕಾಲೇಜಿನ ವಿದ್ಯಾರ್ಥಿ ಮಾಳಪ್ಪ ನಿಂಗಪ್ಪ ಹೊಸಮನಿ 600ಕ್ಕೆ 586 ಅಂಕ ಪಡೆದು, ಶೇಕಡ 97.66ರಷ್ಟು ಸಾಧನೆ ಮಾಡಿ, ರಾಜ್ಯಕ್ಕೆ 9ನೇ ರ‌್ಯಾಂಕ್ ಹಾಗೂ ಜಿಲ್ಲೆಗೆ ಪ್ರಥಮ ರ‌್ಯಾಂಕ್ ಹಂಚಿಕೊಂಡಿದ್ದಾರೆ.
ರೈತ ಕುಟುಂಬದ ಮಗನಾಗಿರುವ ವಿದ್ಯಾರ್ಥಿ ಮಾಳಪ್ಪ, ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಯಾತನೂರು ಗ್ರಾಮದವನಾಗಿದ್ದಾನೆ. ಆದ್ರೆ, ಸಿಂದಗಿಯಲ್ಲಿ ರೂಮ್ ಮಾಡಿಕೊಂಡು, ಜ್ಞಾನ ಭಾರತಿ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದ. ಬಡತನದಲ್ಲಿ ಬೆಳೆದ ವಿದ್ಯಾರ್ಥಿ ಮಾಳಪ್ಪ, ಕನ್ನಡ 100, ಶಿಕ್ಷಣ ಶಾಸ್ತ್ರ 100, ಇತಿಹಾಸ 98, ಹಿಂದಿ 98, ಸಮಾಜಶಾಸ್ತ್ರ 97, ರಾಜ್ಯಶಾಸ್ತ್ರದಲ್ಲಿ 93 ಅಂಗಳನ್ನ ಪಡೆಯುವ ಮೂಲಕ 600ಕ್ಕೆ 586 ಅಂಕ ಪಡೆದಿದ್ದಾನೆ. ವಿದ್ಯಾರ್ಥಿಗೆ ಕಾಲೇಜು ಆಡಳಿತ ಮಂಡಳಿಯಿಂದ ಶುಭಾಶಯ ಕೋರಲಾಗಿದೆ.
ಮಲ್ಲಿಕಾರ್ಜುನ.ಜಿ. ಉಪ್ಪಾರ, ಪ್ರಾಚಾರ್ಯರು, ಕೆ.ಮೆಚ್ಚುಗೆಯರಿ ಪದವಿ ಪೂರ್ವ ಮಹಾವಿದ್ಯಾಲಯ
ಕಡು ಬಡತನದಿಂದ ಬಂದ ವಿದ್ಯಾರ್ಥಿ ಮಾಳಪ್ಪ ಹೊಸಮನಿ, ಸ್ವಂತ ಪರಿಶ್ರಮ ಹಾಗೂ ಕಾಲೇಜಿನ ಶಿಕ್ಷಕರ ಮಾರ್ಗದರ್ಶನದಿಂದ ಉತ್ತಮ ಸಾಧನೆ ಮಾಡಿದ್ದಾನೆ. ಶಿಕ್ಷಕ ಬಳಗ ಹಾಗೂ ಕಾಲೇಜು ಆಡಳಿತ ಮಂಡಳಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.