ಧಾರವಾಡದಲ್ಲಿ ಬಡವರ ಕರುಳಿನ ಕೂಗಾದ ‘ರಾಯಲ್ ಅಲೀಂ’- ಸದ್ದಿಲ್ಲದೇ ನಡೆಯುತ್ತಿದೆ ಅನ್ನ ದಾಸೋಹ…!
1 min readಧಾರವಾಡ: ಕೊರೋನಾ ಮಹಾಮಾರಿಯಿಂದ ತುತ್ತು ಅನ್ನಕ್ಕೂ ಅವಸರಿಸುವ ಬಡವರ ಪಾಲಿಗೆ ಯಾರಿಗೂ ಗೊತ್ತಾಗದ ಹಾಗೇ, ಸೇವೆಯನ್ನ ಧಾರವಾಡದ ರಾಯಲ್ ಕಿಚನ್ ಮಾಲೀಕರೊಬ್ಬರು ಮಾಡುತ್ತಿದ್ದು, ಬಡವರ ಹೊಟ್ಟೆಯನ್ನ ತುಂಬಿಸುತ್ತಿದ್ದಾರೆ.
ಕಳೆದ ವರ್ಷ ಲಾಕ್ ಡೌನ್ ಆರಂಭವಾದ ದಿನದಿಂದಲೂ ನಿರ್ಗತಿಕರ ಹಾಗೂ ಆಸ್ಪತ್ರೆಯಲ್ಲಿನ ರೋಗಿಗಳ ಸಂಬಂಧಿಕರಿಗೆ ಆಹಾರವನ್ನ ಪೂರೈಕೆ ಮಾಡುತ್ತ, ಎಲೆಮರೆ ಕಾಯಿಯಂತೆ ಜನರ ಸೇವೆಯನ್ನ ಮಾಡುತ್ತಿರುವುದು ಅಲೀಂ ಅಕ್ತರ ನಾಯಕ.
ತಮ್ಮ ರಾಯಲ್ ಕಿಚನ್ ಆರಂಭವಾಗುತ್ತಿದ್ದ ಹಾಗೇ ಮೊದಲು ರೆಡಿಯಾಗುವುದು ಬಡವರ ಕೈಗೆ ಸಿಗಬೇಕಾದ ಆಹಾರ. ಕೆಲಸದ ಒತ್ತಡ ಹಾಗೂ ಲಾಕ್ ಡೌನ್ ಸಮಯದಲ್ಲೂ ನೂರಾರು ಜನರಿಗೆ ನಿತ್ಯ ಪೂರೈಕೆ ಮಾಡಲಾಗುತ್ತಿದೆ.
ಸಾಮಾಜಿಕ ಕಾಳಜಿ ಹೊಂದಿರುವ ಅಲೀಂ ಅವರಿಗೆ ಅವರ ಸಹೋದರ ಅಜೀಂ ಸದಾಕಾಲ ಬೆನ್ನಲುಬಾಗಿ ನಿಂತು, ಬಡವರಿಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತಲೇ ಬರುತ್ತಿದ್ದಾರೆ. ಆದರೆ, ಈ ವಿಷಯವನ್ನ ಯಾರಿಗೂ ಗೊತ್ತಾಗದ ಹಾಗೇ ನೋಡಿಕೊಳ್ಳುತ್ತಾರೆ.
ಇಂತಹ ಸಹೋದರರ ಬಗ್ಗೆ ಕರ್ನಾಟಕವಾಯ್ಸ್.ಕಾಂ ಉದ್ದೇಶಪೂರ್ವಕವಾಗಿ ಮಾಹಿತಿಯನ್ನ ಹೊರಗೆ ಹಾಕುತ್ತಿದೆ. ಏಕೆಂದರೆ, ಇಂಥವರ ಸಂಖ್ಯೆ ಹೆಚ್ಚಾಗಲಿ ಮತ್ತೂ ಅಲೀಂನಂತ ಮಾನವೀಯ ಗುಣದವರಿಗೆ ಒಳ್ಳೆಯದಾಗಲಿ ಎಂದು.