ಹುಬ್ಬಳ್ಳಿಯಲ್ಲಿ ಬೈಕ್ ತಂದ್ರೇ ಸೀಜ್ ಎಂದಿದ್ದ ಪೊಲೀಸರಿಗೆ ಚಾಲೆಂಜ್ ಮಾಡಿದ ಒಂದೀಡಿ ಕುಟುಂಬ…!

ಹುಬ್ಬಳ್ಳಿ: ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಬೈಕ್ ಸಂಚಾರಕ್ಕೆ ಅವಕಾಶವನ್ನ ಕೊಡುವುದಿಲ್ಲವೆಂದು ಹೇಳಿದ ಪೊಲೀಸರಿಗೆ ಚಾಲೆಂಜ್ ಮಾಡಿದ ಒಂದೀಡಿ ಕುಟುಂಬ, ಒಂದೇ ಗಾಡಿಯಲ್ಲಿ ಬಂದು ಹೋದರೂ ಪೊಲೀಸರು ಅವರನ್ನ ನೋಡಿದರೂ ಏನೂ ಮಾಡದಿರುವ ಸ್ಥಿತಿ ನಿರ್ಮಾಣವಾಗಿತ್ತು. ಅದು ಹೆಂಗೇ ಅಂತೀರಾ.. ಈ ವೀಡಿಯೋ ನೋಡಿ..
ಪ್ರತಿಯೊಂದು ವಸ್ತುಗಳು ಸ್ಥಳೀಯ ಅಂಗಡಿಗಳಲ್ಲಿ ಸಿಗದ ಕಾರಣ, ಸುಮಾರು ಐದಾರೂ ಕಿಲೋಮೀಟರ್ ನಡೆದುಕೊಂಡು ಹೇಗೆ ಬರಬೇಕೆಂಬ ಪ್ರಶ್ನೆಗೆ ಸರಕಾರದ ಬಳಿ ಯಾವುದೇ ಉತ್ತರವಿಲ್ಲದ ಕಾರಣ, ಶಾಣ್ಯಾ ಮಂದಿ ತಮ್ಮದೇ ಬುದ್ದಿ ಉಪಯೋಗಿಸಿ ಹೀಗೆ ಚಕ್ಕಡಿಯಲ್ಲಿ ಬಂದು ಹೋದರು.
ಚಕ್ಕಡಿ ಬರಬೇಕಾ ಅಥವಾ ಬೇಡವೋ ಎಂಬುದರ ಬಗ್ಗೆ ಗೈಡಲೈನ್ಸ್ ನಲ್ಲಿ ಏನೂ ಗೊತ್ತಿಲ್ಲದ ಕಾರಣ, ಪೊಲೀಸರು ಏನೂ ಮಾಡದೇ ಸುಮ್ಮನೆ ಕೂಳಿತುಕೊಂಡಿದ್ದು, ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿತ್ತು.