‘ಕ್ಲಾಸ್’ ನೆಪದಲ್ಲಿ ‘ಪಬ್ಜಿ’: ಬೇಡವೆಂದಿಕ್ಕೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ
1 min readಗದಗ: ಆನ್ ಲೈನ್ ಕ್ಲಾಸ್ ತೆಗೆದುಕೊಳ್ಳುವ ನೆಪದಲ್ಲಿ ಪಬ್ಜಿ ಆಡುತ್ತಿದ್ದ ಯುವಕನಿಗೆ ಮನೆಯವರು ಹೀಗೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಕ್ಕೆ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ.
ಗಜೇಂದ್ರಗಡ ಪಟ್ಟಣದ ಹಿರೇಪೇಟೆ ಪ್ರದೇಶದ ಕಾರ್ತಿಕ ಎಂಬ 17 ವರ್ಷದ ವಿದ್ಯಾರ್ಥಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದ್ದೋಬ್ಬ ಮಗನನ್ನ ಕಳೆದುಕೊಂಡು ಪಾಲಕರು ಕಣ್ಣೀರಿಡುತ್ತಿದ್ದಾರೆ.
ಪ್ರತಿದಿನವೂ ಆನ್ ಲೈನ್ ಕ್ಲಾಸ್ ಇದೆಯಂದು ಕೂಡುತ್ತಿದ್ದ ಕಾರ್ತಿಕನನ್ನ ಗಮನಿಸಿದಾಗ ಪಬ್ಜಿ ಗೇಮ್ ಆಡುತ್ತಿರುವುದು ಪದೇ ಪದೇ ಕಂಡು ಬಂದಿದೆ. ಇದನ್ನ ಕಡಿಮೆ ಮಾಡು ಅಭ್ಯಾಸದ ಬಗ್ಗೆ ಹೆಚ್ಚು ಗಮನ ಹರಿಸು ಎಂದು ಪಾಲಕರು ಹೇಳಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡು ಹೀಗೆ ಸಾವಿಗೀಡಾಗಿದ್ದಾನೆಂದು ಗೊತ್ತಾಗಿದೆ.
ಮಗನನ್ನ ಕಳೆದುಕೊಂಡ ಪಾಲಕರು ಸ್ಥಿತಿ ಅಯೋಮಯವಾಗಿದ್ದು, ಪ್ರಕರಣ ಗಜೇಂದ್ರಗಡ ಠಾಣೆಯಲ್ಲಿ ದಾಖಲಾಗಿದೆ.