ಕೊನೆಗೂ ಮಾಜಿ ಮಂತ್ರಿಯ ಮೇಲೆ FIR ದಾಖಲು: ಮದುವೆಯಲ್ಲಿ ಭಾಗವಹಿಸಿದವರ ಮೇಲೂ ಬೀಳತ್ತಾ ಕೇಸ್
1 min readಬಳ್ಳಾರಿ: ಮಾಜಿ ಕಾರ್ಮಿಕ ಸಚಿವ, ಹಾಲಿ ಹಡಗಲಿ ಶಾಸಕ P.T. ಪರಮೇಶ್ವರ್ ನಾಯಕ್ ವಿರುದ್ಧ FIR ದಾಖಲಾಗಿದ್ದು, ಜೂನ್ 14 ರಂದು ಪಿ.ಟಿ.ಪರಮೇಶ್ವರ್ ನಾಯಕ್ ಪುತ್ರನ ಮದುವೆ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆ ಸಂದರ್ಭದಲ್ಲಿ ಸಾವಿರಾರು ಜನ ಸೇರಿಸಿದ್ದ ಪರಮೇಶ್ವರ ನಾಯ್ಕ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಎದುರಾಗಿತ್ತು. SOP & ಕೋವಿಡ್ ACT ಉಲ್ಲಂಘನೆ ಮಾಡಿ ಮದುವೆ ಕಾರ್ಯ ಮಾಡಿದ್ದ ಶಾಸಕರು. ಶಾಸಕ ಪಿ.ಟಿ. ಪರಮೇಶ್ವರ್ ವಿರುದ್ಧ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕು ಅರಸಿಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. IPC ಸೆ.269- ಅಪಾಯಕಾರಿ ಸೋಂಕನ್ನ ಹರಡೋ ಸಂಭವವಿರುವ ನಿರ್ಲಕ್ಷ್ಯ ಕೃತ್ಯ. IPC ಸೆ.270-ಅಪಾಯಕಾರಿ ಸೋಂಕನ್ನ ಹರಡೋ ಸಂಭವವಿರುವ ದ್ವೇಷಪೂರ್ವಕ ಕೃತ್ಯ. IPC ಸೆ.271- ರೋಗ ನಿರೋಧಕ ನಿರ್ಬಂಧ ನಿಯಮ ಉಲ್ಲಂಘಿಸೋದು. IPC ಸೆ.336- ಇತರರ ಪ್ರಾಣ ದೈಹಿಕ ಸುರಕ್ಷತೆಗೆ ಅಪಾಯ ಮಾಡುವ ಪ್ರಕರಣ ದಾಖಲಾಗಿದೆ. ಕೇಸ್ ನಂ 53/2020 ಆಗಿದೆ. ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕು ವ್ಯಾಪ್ತಿಯ ಲಕ್ಷ್ಮಿಪುರದಲ್ಲಿ ಮಾಡಿದ ಮಗನ ಮದುವೆ ಪಿ.ಟಿ.ಪರಮೇಶ್ವರ ನಾಯ್ಕ.