ಹುಬ್ಬಳ್ಳಿ ಗ್ರಾಮೀಣ, ನವಲಗುಂದ, ಧಾರವಾಡ ಗ್ರಾಮೀಣ ಠಾಣೆಯ PSI ಗಳ ವರ್ಗಾವಣೆ….

ಧಾರವಾಡ: ಉತ್ತರ ವಲಯ ಆರಕ್ಷಕ ಮಹಾ ನಿರೀಕ್ಷರಾದ ಡಾ.ಚೇತನಸಿಂಗ್ ರಾಠೋಡ ಅವರು ಒಂಬತ್ತು ಪೊಲೀಸ್ ಠಾಣೆಯ ಪಿಎಸ್ಐಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಧಾರವಾಡ ಗ್ರಾಮೀಣ ಠಾಣೆಯ ಪಿಎಸ್ಐ ಬಸನಗೌಡ ಮೇಳಪ್ಪನವರ ಅವರನ್ನ ವಿಜಯಪುರದ ಬಬಲೇಶ್ವರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ನವಲಗುಂದ ಠಾಣೆಯ ಪಿಎಸ್ಐ ವಿ.ಎಚ್.ಹೆತ್ತಳ್ಳಿ ಅವರನ್ನ ವಿಜಯಪುರ ಜಿಲ್ಲೆಯ ಕೂಡಗಿ ಠಾಣೆಗೆ ಹಾಗೂ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪಿಎಸ್ಐ ಲಕ್ಷ್ಮಿ ದೇಗಿನಾಳ ಅವರನ್ನ ವಿಜಯಪುರ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಗಿದೆ.