ಪೊಲೀಸ್ ಠಾಣೆಯಲ್ಲೇ ಯುವಕರಿಗೆ ಹಿಗ್ಗಾಮುಗ್ಗಾ ಥಳಿತ: ಪಿಎಸ್ಐ ಅಮಾನತ್ತು…

ಬಳ್ಳಾರಿ: ಜಿಲ್ಲೆಯ ಕುರುಗೋಡು ಪಟ್ಟಣದ ಪೊಲೀಸ್ ಠಾಣೆಯ ಪಿಎಸ್ ಐ ರಾಥೋಡ್, ಇಬ್ಬರು ಯುವಕರನ್ನ ಬಂಧಿಸುವಲ್ಲಿ ಎಫ್ಐಆರ್ ದಾಖಲಿಸದೇ ಬಂಧನದ ನಿಯಮಗಳನ್ನು ಪಾಲಿಸದೇ ಠಾಣೆಯಲ್ಲಿ 24 ತಾಸು ಇಟ್ಟುಕೊಂಡು ತೀವ್ರ ಹಲ್ಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಪಿಎಸ್ಐ ರಾಥೋಡ್ ಮತ್ತು ಪೇದೆ ಸುರೇಶ್ ಅವರನ್ನು ಅಮಾನತು ಮಾಡಿರುವುದಾಗಿ ಎಸ್ಪಿ ಅಡಾವತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಕುರುಗೋಡಿನ ವದ್ದಟ್ಟಿ ಗ್ರಾಮದಲ್ಲಿ ನಡೆದ ಜಾನುವಾರುಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಪರಿಶಿಷ್ಟ ಜಾತಿಯ ಭರತ್ ಮತ್ತು ಮಂಜುನಾಥ್ ಎಂಬುವರನ್ನು ಠಾಣೆಗೆ ಕರೆ ತಂದು ಕಳ್ಳತನ ಪ್ರಕರಣ ಒಪ್ಪಿಕೊಳ್ಳುವಂತೆ ಅವರ ಮೇಲೆ ಪೊಲೀಸರು ತೀವ್ರವಾಗಿ ಹಲ್ಲೆ ಮಾಡಿದ್ದಾರೆ.
ಕಳ್ಳತನ ಮಾಡಿದವರು ಬೇರೆಯವರು ಎಂದು ಗೊತ್ತಾದ ಮೇಲೆ ಅವರನ್ನು ಬಿಟ್ಟು ಕಳಿಸಿ ತಾವು ಮಾಡಿದ ಹಲ್ಲೆ ಬಗ್ಗೆ ಯಾರಿಗಾದರೆ ಹೇಳಿದರೆ ಬೇರೆ ಕೇಸಿನಲ್ಲಿ ಫಿಟ್ ಮಾಡುವುದಾಗಿ ಬೆದರಿಕೆ ಹಾಕಿ ಕಳಿಸಿದ್ದಾರೆ.
ಇದನ್ನು ಮನೆಯವರು ಸಹಿಸದೇ ತೀವ್ರವಾಗಿ ಗಾಯಗೊಂಡಿರುವ ಭರತ್ ನನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿ, ಹಲ್ಲೆ ಮಾಡಿದ ಪಿಎಸ್ಐ ಮತ್ತು ಇತರೇ ಪೊಲೀಸ್ ಸಿಬ್ಬಂದಿ ಮೇಲೆ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.