ಧಾರವಾಡ: PSI ರುದ್ರಪ್ಪ ಗುಡದರಿ “ಕಂಟ್ರೋಲ್ ರೂಂ”ಗೆ ‘ಬರ್ತಡೇ ಪ್ರಕರಣ’ ಪೊಲೀಸ್ ಕಮೀಷನರ್ ಆರ್ಡರ್…!!!
ಧಾರವಾಡ: ಖಾಸಗಿ ಹೊಟೇಲ್ನಲ್ಲಿ ಸಮಾಜಘಾತುಕ ಶಕ್ತಿಗಳೊಂದಿಗೆ ಬರ್ತಡೇ ಆಚರಿಸಿಕೊಂಡ ಪಿಎಸ್ಐ ಅವರನ್ನ ಕಂಟ್ರೋಲ್ ರೂಂಗೆ ‘ಅಟ್ಯಾಚ್’ ಮಾಡಿರುವುದಾಗಿ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ, ಡಿಸಿಪಿ ಅವರಿಂದ ವಿಚಾರಣೆ ಕೈಗೊಳ್ಳಲು ಸೂಚಿಸಿರುವ ಕುರಿತು ಕಮೀಷನರ್ ಮಾಹಿತಿ ನೀಡಿದರು.
ಪಿಎಸ್ಐ ರುದ್ರಪ್ಪ ಗುಡದರಿ ಅವರು ರೌಡಿಷೀಟರ್, ಎನ್ಡಿಪಿಎಸ್ ಸೇರಿದಂತೆ ಹಲವು ಪ್ರಕರಣಗಳ ಆರೋಪಿತರ ಜೊತೆ ಬರ್ತಡೇ ಆಚರಿಸಿಕೊಂಡ ಪೋಟೊಗಳು ವೈರಲ್ ಆಗಿದ್ದವು.
