“ಸಣ್ಣ ವಯಸ್ಸಿನ” PSI ಜಗದೀಶ ಸಾವು- ಕಣ್ಣೀರಿಡುತ್ತಿರುವ ಪೊಲೀಸರು…!

ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸಿದ್ದ ಮೇಧಾವಿ
ಆರ್‌ಎಸ್‌ಐ ಆಗಿಯೂ ಅಯ್ಕೆಯಾಗಿ ನಂತರ ಪಿಎಸ್ಐ ಆಗಿದ್ದ ಜಗದೀಶ
ಕಲಬುರಗಿ: 2009 ರ ಬ್ಯಾಚಿನಲ್ಲಿ ಪೊಲೀಸ್ ಆಗಿ ನಂತರ ಪಿಎಸ್ಐ ಆಗಿದ್ದ ಅಧಿಕಾರಿಯೋರ್ವರು ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಕಲಬುರಗಿಯ ಔರಾದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಗದೀಶ ನಾಯ್ಕ ಅವರು ಮೂಲತಃ ಶಿವಮೊಗ್ಗದವರು.
ಪಿಎಸ್ಐ ಜಗದೀಶ ನಾಯ್ಕ ಅವರ ಸಾವು, ಈ ಭಾಗದ ಪೊಲೀಸರಲ್ಲಿ ತೀವ್ರ ನೋವನ್ನುಂಟು ಮಾಡಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು.