ಹುಬ್ಬಳ್ಳಿ-ಧಾರವಾಡದಲ್ಲಿ ಒಂದೇ ದಿನ 2 PSI, 7ASI ನಿವೃತ್ತಿ….

ಹುಬ್ಬಳ್ಳಿ: ಕಮೀಷನರೇಟ್ ವ್ಯಾಪ್ತಿಯಲ್ಲಿ ಇಂದು ಒಂದೇ ದಿನ ಇಬ್ಬರು ಪಿಎಸ್ಐಗಳು, ಏಳು ಜನ ಎಎಸ್ಐಗಳು ವಯೋನಿವೃತ್ತಿ ಹೊಂದಿದರು.
1993 ಬ್ಯಾಚಿನ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಎಫ್.ಎಸ್.ಭಜಂತ್ರಿ, ಸಿಎಆರ್‌ನ ಆರ್‌ಎಸ್‌ಐ ಕೆ.ಎಂ.ನಾಯ್ಡು, ಎಎಸ್ಐಗಳಾದ ಉತ್ತರ ಸಂಚಾರಿ ಠಾಣೆಯ ಎನ್.ಎ.ಮಾಧನಬಾವಿ, ಮಹಿಳಾ ಪೊಲೀಸ್ ಠಾಣೆಯ ಎ.ಕೆ.ದೇಶಪಾಂಡೆ, ನವನಗರ ಎಪಿಎಂಸಿ ಠಾಣೆಯ ಆರ್.ಎ.ಸೂಡಿ, ಹುಬ್ಬಳ್ಳಿ ಉಪನಗರ ಠಾಣೆಯ ಸಿ.ಬಿ.ವಾಲಿಕಾರ, ಹುಬ್ಬಳ್ಳಿ ಶಹರ ಠಾಣೆಯ ವಿ.ಎಸ್.ಹಡಗಲಿ, ಕಮರಿಪೇಟೆ ಠಾಣೆಯ ಎನ್.ಕೆ.ಸೋಮರೆಡ್ಡಿ ಹಾಗೂ ಸಿಎಆರ್‌ನ ಎಆರ್‌ಎಸ್‌ಐ ಜೆ.ಬಿ.ತಿವಾರಿ ವಯೋನಿವೃತ್ತಿಗೊಂಡರು.
ಪೊಲೀಸ್ ಕಮೀಷನರ್ ಸಂತೋಷ ಬಾಬು, ಡಿಸಿಪಿ ಗೋಪಾಲ ಬ್ಯಾಕೋಡ್, ನವನಗರ ಎಪಿಎಂಸಿ ಠಾಣೆಯ ಇನ್ಸಪೆಕ್ಟರ್ ಬಾಳಪ್ಪ ಮಂಟೂರ ಉಪಸ್ಥಿತರಿದ್ದು, ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹರಸಿದರು.