ಆನ್ಲೈನ್ ಮೂಲಕ ಮೊಬೈಲ್ ಖರೀದಿಸಿ “ಶ್ರೀಮಂತ”ನಾಗಲು ಹೊರಟ ಧಾರವಾಡದ “420 ಪಿಎಸ್ಐ”….!

ಧಾರವಾಡ: ವಂಚನೆ ಆರೋಪದಡಿ ಪ್ರಕರಣ ದಾಖಲಾದ ಆರೋಪಿಯ ಹಣದಿಂದಲೇ ಮೊಬೈಲ್ ಖರೀದಿಸಿ, ಶ್ರೀಮಂತನಾಗಲು ಹೊರಟಿರುವ 420ಪಿಎಸ್ಐಗೆ ಹಿರಿಯ ಅಧಿಕಾರಿಗಳು ‘ಛೀ.. ಥೂ’ ಎಂದಿದ್ದಾರೆಂದು ಗೊತ್ತಾಗಿದೆ.

ಬಡವರ ಮನೆಯ ಮಕ್ಕಳ ಲಕ್ಷಾಂತರ ರೂಪಾಯಿ ಹಣವನ್ನ ನೌಕರಿ ಕೊಡಿಸುವ ನೆಪದಲ್ಲಿ ಕಬಳಿಕೆ ಮಾಡಿದ್ದ ಆಸಾಮಿಯೋರ್ವನಿಗೆ ಬೆಂಗಾವಲಾಗಿ ನಿಂತಿರುವ 420 ಪಿಎಸ್ಐ, ವಂಚನೆ ಕೇಸ್ ದಾಖಲಾಗುವ ಮುನ್ನವೇ ವಂಚಕನಿಂದಲೇ ದೂರು ಪಡೆದುಕೊಂಡು, ಅನ್ಯಾಯವಾದ ನೌಕರಿ ವಂಚಿತರ ಮೇಲೆ ಬ್ಲ್ಯಾಕ್ ಮೇಲ್ ಪ್ರಕರಣ ದಾಖಲು ಮಾಡಿದ ಕೀರ್ತಿಯನ್ನ ಮಹಾನ್ ಕಲಾವಿದವರು ಮಾಡಿದ್ದಾರಂತೆ.
ವಂಚಕನಿಂದಲೇ ಹಣವನ್ನ ಪಡೆದು ಲಕ್ಷ ಬೆಲೆ ಬಾಳುವ ಮೊಬೈಲ್ ಖರೀದಿಸಿದ್ದ 420 ಪಿಎಸ್ಐ, ತಾನು ಮಾಡಿದ್ದನ್ನ ಆತ್ಮಸಾಕ್ಷಿಯ ವಿರುದ್ಧವೂ ನಡೆದುಕೊಳ್ಳುತ್ತಿದ್ದಾರಂತೆ.
ಇಂತವರಿಂದ ಸಮಾಜ ಏನು ನಿರೀಕ್ಷೆ ಮಾಡಲು ಸಾಧ್ಯ ಬಡವರ ಮನೆಯ ಮಕ್ಕಳ ಹಣವನ್ನ ವಂಚನೆ ಮಾಡಿ, ಅದೇ ಹಣವನ್ನ ವಂಚಕನಿಂದ ಪಡೆದು ಖರೀದಿಸಿದ ಮೊಬೈಲ್ ಎಷ್ಟು ದಿನ ಬಂದೀತು ಅಲ್ಲವೇ.. ಇಂತವರಿಗೆ ಪೊಲೀಸ್ ಕಮೀಷನರ್ ತಕ್ಕ ಪಾಠ ಕಲಿಸಬೇಕಿದೆ.. ಅಲ್ಲವೇ..
ಬಡವರ ಮಕ್ಕಳ ಹಣವನ್ನ ಮರಳಿ ಕೊಡಿಸುವುದನ್ನ ಬಿಟ್ಟು, ಅದೇ ವಂಚನೆಯ ಹಣದಿಂದ ಮೊಬೈಲ್ ಖರೀದಿಸಿ “ಶ್ರೀಮಂತ”ನ ಫೋಸ್ ಕೊಟ್ಟ ದುಶ್ಯಾಸನಿಗೆ ಧಿಕ್ಕಾರವಿರಲಿ..