Posts Slider

Karnataka Voice

Latest Kannada News

ನೂರಾರೂ ಪೊಲೀಸರಿಗೆ ಮಾದರಿಯಾಗುವ “ಕರ್ತವ್ಯ” ನಿರ್ವಹಿಸಿದ PSI…

1 min read
Spread the love

ಕೊಳೆತ ಶವಕ್ಕೆ ಹೆಗಲು ಕೊಟ್ಟ ಪಿಎಸ್ಐ

ದುರ್ಗಮ ಸ್ಥಳದಲ್ಲಿ ನಡೆದು ಸಾಗಿದ ಅಧಿಕಾರಿ

ಅಂಕೋಲಾ: ಕಡಲ ತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಮೃತ ದೇಹವನ್ನ ಸಾಗಿಸಲು ಸ್ವತಃ ಪಿಎಸ್‌ಐಯವರೇ ಹೆಗಲು ಕೊಟ್ಟು ಶವವನ್ಕ ಸಾಗಿಸಿದ್ದು, ಪಿಎಸ್ಐಯವರ ಕಾರ್ಯಕ್ಕೆ ಸಾರ್ವಜನಿಕರ ಶ್ಲಾಘನೆ ವ್ಯಕ್ತವಾಗಿದೆ.

ವೀಡಿಯೋ..

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನೆಬೈಲ್ ಕಡಲ ತೀರದಲ್ಲಿ ಸುಮಾರು 35ರಿಂದ 40 ವರ್ಷದ ಅಪರಿಚಿತ ಪುರುಷನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಪರಿಚಿತ ಶವ ಪತ್ತೆಯಾಗಿರುವ ಸುದ್ದಿ ತಿಳಿದ ಕೂಡಲೇ ಅಂಕೋಲಾ‌ PSI ಉದ್ದಪ್ಪ ಅಶೋಕ ಡಿ ಅವರು ತಮ್ಮ ಸಿಬ್ಬಂದಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಸುಮಾರು 20 ದಿನಗಳ ಹಿಂದೆ ಮೃತ ಪಟ್ಟಿರುವುದಾಗಿ ಶಂಕೆ ವ್ಯಕ್ತವಾಗಿದ್ದು, ಮೃತ ದೇಹ ಸಂಪೂರ್ಣವಾಗಿ ಕೊಳೆತು ಹೋಗಿತ್ತು. ಶವ ಪತ್ತೆಯಾಗಿರುವ ಸ್ಥಳ ದುರ್ಗಮ ಪ್ರದೇಶವಾಗಿದ್ದು, ಶವ ಪತ್ತೆಯಾಗಿದ್ದ ಸ್ಥಳಕ್ಕೆ ಯಾವುದೇ ವಾಹನ ಹೋಗದ ಪರಿಸ್ಥಿತಿ ಇತ್ತು. ಹೀಗಾಗಿ ಘಟನಾ ಸ್ಥಳದಿಂದ ಹೆಗಲ ಮೇಲೆ ಹೊತ್ತುಕೊಂಡೆ ಶವ ಸಾಗಿಸಬೇಕಾದ ಪರಿಸ್ಥಿತಿ ಎದುರಾಗಿತ್ರು.
ಕಾರಣ ಪರಿಶೀಲನೆ ಬಳಿಕ ಶವವನ್ನ ವಾಹನದ ಇರುವ ಸ್ಥಳದವರಗೆ ಹೊತ್ತುಕೊಂಡೆ ಹೋಗಬೇಕಾಗಿದ್ದು, ಶವವನ್ನ ಸಾಗಿಸುವಾಗ ಪಿಎಸ್ಐ ಉದ್ದಪ್ಪ ಅವರು ತಾವೊಬ್ಬ ಪೊಲೀಸ್ ಅಧಿಕಾರಿ ಅನ್ನುವುದನ್ನ ಬದಿಗಿಟ್ಟು ಸಾಮಾನ್ಯರಂತೆ ಶವ ಸಾಗಿಸಲು ಹೆಗಲುಕೊಟ್ಟಿದ್ದಾರೆ.

ಪಿಎಸ್ಐ‌ ಅವರು ಹೆಗಲು ಕೊಟ್ಟು ಶವ ಸಾಗಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.


Spread the love

Leave a Reply

Your email address will not be published. Required fields are marked *