“ಈಶ್ವರ” ಕಾಪಾಡಿದ ಪಿಎಸೈ “ಮಹೇಂದ್ರ”ಕುಮಾರ: ಬದುಕೇ ಸಾಕಾದವನಿಗೆ ಜೀವನ ನೀಡಿದ ಮಹಾನುಭಾವ..!

ಧಾರವಾಡ: ಜೀವನಕ್ಕಾಗಿ ದೂರದ ಮಧ್ಯಪ್ರದೇಶದಿಂದ ಬಂದು ಬದುಕು ಕಳೆದುಕೊಂಡವನಿಗೆ ತವರು ಮನೆಗೆ ಹೋಗಲು ಹಣವಿಲ್ಲದೇ ಪರದಾಡುತ್ತಿದ್ದಾಗ ಮಾನವೀಯತೆ ಮೆರೆದು, ಆತನನ್ನ ಹುಟ್ಟಿದೂರಿಗೆ ಕಳಿಸಿದ ಪ್ರಕರಣವಿಂದು ನಡೆದಿದೆ.
ಧಾರವಾಡ ಗ್ರಾಮೀಣ ಠಾಣೆಯ ಪಿಎಸೈ ಮಹೇಂದ್ರಕುಮಾರ ನಾಯ್ಕ, ಮಾನವೀಯತೆ ಮರೆದಿರುವ ಪಿಎಸೈ. ಇಡೀ ಪ್ರಕರಣದ ಬಗ್ಗೆ ನಿಮಗೆ ಮಾಹಿತಿ ಬೇಕಾದ್ರೇ ಇದನ್ನ ಪೂರ್ಣವಾಗಿ ಓದಿ..
ಕೆಲವು ದಿನಗಳ ಹಿಂದೆ ಬೈಪಾಸ್ ಬಳಿ ರಸ್ತೆ ಬೈಕ್ ಹಾಗೂ ಲಾರಿಯ ನಡುವೆ ಅಪಘಾತವಾಗಿತ್ತು. ಆ ಪ್ರಕರಣದಲ್ಲಿ ಮಧ್ಯಪ್ರದೇಶ ಇಂದೋರ ಬಳಿಯ ನಿವಾಸಿ ಈಶ್ವರ ಗಾಯಗೊಂಡು ಕಾಲು ಮುರಿದುಕೊಂಡಿದ್ದ. ತನ್ನ ಕುಟುಂಬದ ಸಲುವಾಗಿ ಚಾಪೆ ಮಾರಾಟ ಮಾಡುತ್ತಿದ್ದವನ ಬಳಿ ಚಿಕಿತ್ಸೆಗೂ ಹಣವಿಲ್ಲದೇ ಇರುವಾಗ ಇದೇ ಠಾಣೆಯ ಹೆಡ್ ಕಾನ್ಸಟೇಬಲ್ ನಿಂಗಪ್ಪ ತಂಬೋಗಿ ಹಾಗೂ ಮೋಹನ ಪಾಟೀಲ ವಿಷಯವನ್ನ ಪಿಎಸ್ಐ ಮಹೇಂದ್ರಕುಮಾರರಿಗೆ ತಿಳಿಸಿದಾಗ, ಎಲ್ಲವನ್ನೂ ಸರಿ ಮಾಡಲು ಮುಂದಾದ್ರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಗಿದು ಮನೆಗೆ ಹೋಗಲು ಆತನ ಬಳಿ ಹಣ ಇರಲೇ ಇಲ್ಲ. ದೂರದ ಮಧ್ಯಪ್ರದೇಶಕ್ಕೆ ಹೋಗುವುದಾದರೂ ಹೇಗೆ ಎಂದುಕೊಂಡು ಚಿಂತಿತನಾದಗಲೇ ಒನ್ಸ್ ಅಗೇನ್ ಸಹಾಯಕ್ಕೆ ಮುಂದೆ ಬಂದಿದ್ದು, ಇದೇ ಪಿಎಸೈ ಮಹೇಂದ್ರಕುಮಾರ ನಾಯ್ಕ.
ಮಹೇಂದ್ರಕುಮಾರ ನಾಯ್ಕ, ಸ್ವತಃ ಮುಂದೆ ನಿಂತು ಇಂದು ವಾಹನದ ವ್ಯವಸ್ಥೆಯನ್ನ ಮಾಡಿ, ಬಾಡಿಗೆಯನ್ನೂ ಹೋಗುವವರೆಗೆ ಖರ್ಚಿಗೆ ಹಣವನ್ನೂ ಕೊಟ್ಟು ಕಳಿಸಿದ್ರು. ಕಾಲು ಮುರಿದುಕೊಂಡು ಕಾರಲ್ಲಿ ಕೂತಿದ್ದ ಈಶ್ವರ, ಪಿಎಸೈಯವರನ್ನ ನೋಡಿ ಕಣ್ಣೀರಾಗಿ “ಭಗವಾನ್ ಆಪ್ ಕೋ ಅಚ್ಚಾ ರಖೇ” ಎಂದು ಬೇಡಿಕೊಂಡು ಕಣ್ಣೀರೊರೆಸಿಕೊಳ್ಳುತ್ತಿದ್ದಾಗಲೇ, ಕಾರು ಠಾಣೆಯಂಗಳದಿಂದ ಹೊರಗೆ ಹೊರಟಿತ್ತು..
ಪಿಎಸ್ಐ ಮಹೇಂದ್ರಕುಮಾರ ಅವರೇ ನಿಜವಾಗಿಯೂ ನಿಮಗೆ ದೇವರು ಒಳ್ಳೆಯದನ್ನ ಮಾಡಲಿ.. ನಿಮ್ಮಂತವರ ಅವಶ್ಯಕತೆ ಪೊಲೀಸ್ ಇಲಾಖೆಗೆ ಇದೆ..