ಧಾರವಾಡ ನಿವೃತ್ತ ಪಿಎಸೈ ಕೊರೋನಾದಿಂದ ಸಾವು: ಮಡುವುಗಟ್ಟಿದ ದುಃಖ
ಧಾರವಾಡದ ಶಹರ ಠಾಣೆಯಲ್ಲಿ ಕಾರ್ಯನಿರ್ವಹಿಸಿ ಕೊನೆಗೆ ನಿವೃತ್ತಿ ಹೊಂದಿದ್ದರು. ಕಳೆದ 18 ದಿನದಿಂದ ಚಿಕಿತ್ಸೆಯಲ್ಲಿದ್ದರು. ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ನಂತರ ಕಿಮ್ಸಗೆ ದಾಖಲು ಮಾಡಲಾಗಿತ್ತು.
ಧಾರವಾಡ: ಉಪನಗರ ಠಾಣೆಯಲ್ಲಿ ಪಿಎಸೈ ಆಗಿ ಕಾರ್ಯನಿರ್ವಹಣೆ ಮಾಡಿ ನಿವೃತ್ತರಾಗಿದ್ದ ಧಾರವಾಡದ ನಿವಾಸಿ ಕೊರೋನಾ ಪಾಸಿಟಿವ್ ನಿಂದ ಗುಣಮುಖರಾಗದೇ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಧಾರವಾಡ ಹೊಯ್ಸಳನಗರದ ನಿವಾಸಿಯಾಗಿದ್ದ ನಿವೃತ್ತ ಪಿಎಸೈ ರಮೇಶ ಕಾತರಕಿ ಕೆಲವು ದಿನಗಳ ಹಿಂದೆ ಕೊರೋನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಕಿಮ್ಸ್ ಗೆ ದಾಖಲು ಮಾಡಲಾಗಿತ್ತು.
ಮೂರು ಹೆಣ್ಣು ಮಕ್ಕಳನ್ನು ಹೊಂದಿದ್ದ ರಮೇಶ ಕಾತರಕಿ, ಹುಬ್ಬಳ್ಳಿ-ಧಾರವಾಡದ ಅನೇಕ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದರು. ಕೊರೋನಾದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಕಿಮ್ಸನಿಂದಲೇ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಹೇಳಲಾಗಿದ್ದು, ಮೃತರ ಕುಟುಂಬದಲ್ಲಿ ದುಃಖ ಮಡುವುಗಟ್ಟಿದೆ.