ಇರಾಣಿ ಗ್ಯಾಂಗನಿಂದ ಹಲ್ಲೆ: ಪಿಎಸೈ, ಎಎಸ್ಐ ಬೆಂಗಳೂರಿನ ಕಾಮಾಕ್ಷಿ ಪಾಳ್ಯದವರು…!
ಧಾರವಾಡ: ಸಂಗಮ ವೃತ್ತದಲ್ಲಿ ನಡೆದಿರುವ ಪೊಲೀಸರ ಹಲ್ಲೆಗೆ ಸಂಬಂಧಿಸಿದಂತೆ ಘಟನೆಯ ಬಗ್ಗೆ ಮತ್ತಷ್ಟು ಮಾಹಿತಿ ಸಿಕ್ಕಿದ್ದು, ಹಲ್ಲೆಗೊಳಗಾದ ಪೊಲೀಸರು ಆಂದ್ರದವರಲ್ಲ ನಮ್ಮ ಕರ್ನಾಟಕದ ಬೆಂಗಳೂರು ಪೊಲೀಸರು ಎಂದು ಗೊತ್ತಾಗಿದೆ.
ಆರೋಪಿಗಳ ಬಂಧನಕ್ಕೆ ಹೋಗಿದ್ದ ಪಶ್ಚಿಮ ವಿಭಾಗ ಪೊಲೀಸರ ಮೇಲೆ ಹಲ್ಲೆ ನಡೆದಿದೆ. ಕಾಮಾಕ್ಷಿಪಾಳ್ಯ ಪಿಎಸ್ ಐ ಸಂತೋಷ್ ಹಾಗೂ ಎಎಸ್ ಐ ರವಿಕುಮಾರ್ ಮೇಲೆ ಹಲ್ಲೆ ನಡೆದಿದೆ. ಕಳ್ಳತನ ಪ್ರಕರಣವೊಂದರಲ್ಲಿ ಆರೋಪಿಗಳನ್ನು ಬಂಧಿಸಲು ಧಾರವಾಡಕ್ಕೆ ಬಂದಿದ್ದ ತಂಡದಲ್ಲಿ ಒಟ್ಟು ನಾಲ್ವರಿದ್ದರು. ಆರೋಪಿಗಳನ್ನು ಹಿಡಿಯಲು ಹೋದಾಗ ಪರಾರಿಯಾಗಲು ಗುಂಪೊಂದು ಸಹಕಾರ ನೀಡಿದೆ. ಈ ಸಮಯದಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ
ಧಾರವಾಡ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು.
ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಮಾಹಿತಿಯನ್ನ ನೀಡಿದ್ದಾರೆ.
ಗಾಯಗೊಂಡಿರುವ ಪಿಎಸೈ ಸೇರಿದಂತೆ ನಾಲ್ವರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
