Posts Slider

Karnataka Voice

Latest Kannada News

ರಕ್ತ ಕೊಟ್ಟು, ನೀರು ಬಿಡೆವು ಎಂದ “ಜೆಕೆ” ಜಿಲ್ಲಾಧ್ಯಕ್ಷ ಸುಧೀರ ಮುದೋಳ…

1 min read
Spread the love

ಧಾರವಾಡ: ಕಾವೇರಿ ನದಿ ನೀರನ್ನ ತಮಿಳುನಾಡಿಗೆ ಬಿಡಬಾರದೆಂದು ಆಗ್ರಹಿಸಿ ಕರೆದಿದ್ದ ಕರ್ನಾಟಕ ಬಂದ್‌ಗೆ ಬೆಂಬಲಿಸಿ ಧಾರವಾಡದಲ್ಲಿ ಜಯ ಕರ್ನಾಟಕ ಸಂಘಟನೆ ತೀವ್ರ ಹೋರಾಟ ನಡೆಸಿತು.

ರಕ್ತದಲ್ಲಿ “ಕಾವೇರಿ ನಮ್ಮದು” ಎಂದು ಬರೆಯುವ ಮೂಲಕ ರಕ್ತ ಕೊಟ್ಟೇವು, ನೀರು ಬಿಡೆವು ಎಂಬ ಸಂದೇಶ ಸಾರಿದರು.

ವೀಡಿಯೋ..

ಮನವಿ ಪತ್ರದ ಸಾರಾಂಶ..

ಇವರಿಗೆ
ಮಾನ್ಯ ಜಿಲ್ಲಾಧಿಕಾರಿಗಳು
ಧಾರವಾಡ ಜಿಲ್ಲೆ.

ಇವರ ಮೂಲಕ

ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಬೆಂಗಳೂರು ರವರಿಗೆ

ವಿಷಯ:- ಕಾವೇರಿ ಮತ್ತು ಮಹಾದಾಯಿ ನದಿ ನೀರು ಹಂಚಿಕೆಯ ವಿಚಾರವಾಗಿ ಇಂದು ಜಯ ಕರ್ನಾಟಕ ಸಂಘಟನೆಯಿಂದ ರಕ್ತದಲ್ಲಿ ಕಾವೇರಿ ನಮ್ಮದು ಎಂದು ಬರೆದು ಹೋರಾಟ ಉರುಳು ಸೇವೆ ಮಾಡುವ ಮುಖಾಂತರ ಹೋರಾಟ ಮಾಡಲಾಯಿತು.

ಮಾನ್ಯರೇ,
ಕಾವೇರಿ ಮತ್ತು ಮಹಾದಾಯಿ ನದಿ ನೀರಿನ ವಿಚಾರವಾಗಿ ಹಲವು ದಶಕಗಳಿಂದ ನಮ್ಮ ರಾಜ್ಯದಲ್ಲಿ ಹೋರಾಟ ನಡೆಯುತ್ತಿದ್ದು ಈವರೆಗೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಿಲ್ಲ. ಸಮಸ್ಯೆ ಬಗೆಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಿ ಡಬ್ಲ್ಯೂ ಆರ್‌ ಸಿ ವನ್ನು ರಚನೆ ಮಾಡಿದ್ದು ಅಧಿಕಾರಿ ಮಂಡಳಿಯ ಆದೇಶದಂತೆ ನೀರು ಬಿಡುತ್ತಿದ್ದು *ರಾಜ್ಯದಲ್ಲಿ ಮಳೆಯ ಅಭಾವದಿಂದ ಡ್ಯಾಮ್ ನಲ್ಲಿ ನೀರು ಶೇಖರಣೆ ಇಲ್ಲದಿದ್ದರೂ ವಾಸ್ತ ವಾಂಶವನ್ನು ಪರಿಗಣಿಸದೆ ತಮಿಳುನಾಡಿಗೆ ನೀರು ಬಿಡುತ್ತಿರುವುದು ಖಂಡನೀಯ*, ಕರ್ನಾಟಕದ ಜನತೆಗೆ ಕುಡಿಯಲು ನೀರಿಲ್ಲದಿರುವಾಗ ತಮಿಳುನಾಡಿನ ಜನತೆಗೆ 3ನೇ ಬೆಳೆ ಬೆಳೆಯಲು ನೀರು ಬಿಡುವುದು, ಬಿಡುತ್ತಿರುವುದು ಸರಿಯೇ…? ಒಬ್ಬರಿಗೆ ಒಳ್ಳೆಯದನ್ನು ಬಯಿಸಿ ಮತ್ತೊಬ್ಬರನ್ನು ಅನ್ಯಾಯ ಮಾಡುವ ಈ ನೀತಿ ಪ್ರಾಧಿಕಾರದ ಅಜೆಂಡದಲ್ಲಿ ರಚನೆಯಾಗಿದೆಯೇ…? ಬ್ರಿಟಿಷರ ಕಾಲದಿಂದಲೂ ಈ ದ್ವಂದ್ವ ನೀತಿ ಅನುಸರಿಸುತ್ತಿದ್ದು ಸುಮಾರು 740 ಟಿಎಂಸಿ ನೀರಿನಲ್ಲಿ ಶೇ 65 ರಿಂದ 70ರಷ್ಟು ನೀರನ್ನು ತಮಿಳುನಾಡಿಗೆ ಹರಿಸಿ ಉಳಿದ ಶೇ 30 ರಿಂದ 35 ನೀರನ್ನು ಮಾತ್ರ ಕರ್ನಾಟಕದ ಬಳಕೆಗೆ ನೀಡುತ್ತಿರುವುದು ಎಷ್ಟರಮಟ್ಟಿಗೆ ಸರಿಯಾಗಿದೆ. ಶೇ 100 ರಷ್ಟು ಮಳೆ ಬೀಳುವ ಕಾವೇರಿ ಜಲಾನಯನ ಪ್ರದೇಶ ಕರ್ನಾಟಕದ್ದೇ ಆಗಿದೆ. ಆದ್ದರಿಂದ ಹೆಚ್ಚಿನ ಪಾಲು ನಮ್ಮದಾಗಿರುತ್ತದೆ ಆದರೆ ನೀರು ಹಂಚಿಕೆಯಲ್ಲಿ ಸಿಂಹ ಪಾಲು ತಮಿಳುನಾಡಿಗೆ ಹಂಚಿಕೆ ಮಾಡಿಕೊಟ್ಟು ಕರ್ನಾಟಕಕ್ಕೆ ಅನ್ಯಾಯ ಮಾಡಲಾಗಿದೆ.

ಮಹಾದಾಯಿ ನದಿ ನೀರಿನ ವಿಚಾರದಲ್ಲಿ ಇರುವ ವಿವಾದದ ಬಗ್ಗೆಯೂ ಸಹ ಇದುವರೆಗೆ ನಿಮ್ಮ ಜನರಿಗೆ ನಮ್ಮ ನಾಡಿಗೆ ಅನ್ಯಾಯವಾಗಿದೆ ಕೇಂದ್ರ ಮತ್ತು ರಾಜ್ಯದಲ್ಲಿ ಎರಡೂ ಕಡೆಗಳಲ್ಲಿ ಒಂದೇ ಪಕ್ಷದ ಸರ್ಕಾರಗಳು ಆಡಳಿತದಲ್ಲಿದ್ದರೂ ಮಹಾದಾಯಿ ಮತ್ತು ಕಾವೇರಿ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಇದುವರೆಗೂ ಆಡಳಿತ ಮಾಡಿದ ಯಾವುದೇ ಸರ್ಕಾರಗಳು ಶಾಶ್ವತ ಪರಿಹಾರ ರೂಪಿಸದೆ ಒಬ್ಬರನ್ನೊಬ್ಬರು ದೂಷಿಸುತ್ತಿರುವುದು ನಮ್ಮ ರಾಜ್ಯದ ಜನರ ದುರದೃಷ್ಟವೆಂದೇ ಹೇಳಬೇಕು.
ಕಾವೇರಿ ಜಲಾನಯ ಪ್ರದೇಶದಲ್ಲಿ ಮಳೆಯ ಕೊರತೆ ಜಲಾಶಯದ ನೀರಿನ ಸಂಗ್ರಹ ಪ್ರಮಾಣ ಇತ್ಯಾದಿ ಅಂಶಗಳ ನೈಜ ಚಿತ್ರಣವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಅಥವಾ ಉಚ್ಚನ್ಯಾಯಾಲಯದ ಮುಂದೆ ಪರಿಣಾಮಕಾರಿಯಾಗಿ ತೆರೆದಿಟ್ಟು ಕನ್ನಡ ನಾಡಿನ ಜನತೆಗೆ ನ್ಯಾಯ ದೊರಕಿಸಿ ಕೊಡುವಲ್ಲಿ ನಮ್ಮ ಸಂಸದರಾದ ನೀವು ಧ್ವನಿ ಎತ್ತದೆ ಈ ವಿಚಾರದಲ್ಲಿ ನಮ್ಮ ನಾಡಿನ ಜನರ ಪರವಾಗಿ ನಿಲ್ಲದೇ ಇರುವುದು ಮತ್ತು ಈವಿಚಾರದಲ್ಲಿ ರಾಜ್ಯ ಸರ್ಕಾರವೂ ಸಹ ಸಂಪೂರ್ಣ ವಿಫಲವಾಗಿರುವುದು ನಮ್ಮ ಜನತೆಗೆ ಗೋಚರವಾಗಿದೆ
ನಮ್ಮಲ್ಲಿರುವ ಈಗಿನ ನೀರಿನ ನೈಜ ಚಿತ್ರಣ 48.9 ಟಿಎಂಸಿ ನೀರು ಮಾತ್ರ ಇದ್ದು ಇತ್ತೀಚಿಗೆ ಘನ ನ್ಯಾಯಾಲಯದ ಆದೇಶ ತೀರ್ಪಿನ ಪ್ರಕಾರ ಪ್ರತಿದಿನ 3000 ಕ್ಯೂಸಿಯಸ್ ನೀರನ್ನು 18 ದಿನಗಳ ಕಾಲ ಹರಿದು ಬಿಟ್ಟರೆ ಸುಮಾರು 5 ಟಿಎಂಸಿ ನೀರು ನಮ್ಮ ಡ್ಯಾಮ್ ನಿಂದ ಕಾಲಿ ಆಗುತ್ತದೆ*.ಆದ್ದರಿಂದ ಯಾವುದೇ ಕಾರಣಕ್ಕೂ ಕಾವೇರಿ ನೀರು ನಿರ್ವಹಣಾ ಸಮಿತಿ ಸಿ ಡಬ್ಲ್ಯೂ ಆರ್‌ ಸಿ ಶಿಫಾರಸನ್ನು ಒಪ್ಪಲೇ ಬಾರದದೆಂದು ಆಗ್ರಹಿಸುವ ಮೂಲಕ ನಮ್ಮ ನಾಡಿನ ಹಿತಾಸಕ್ತಿಗೆ ಚುನಾಯಿತ ಜನಪ್ರತಿನಿದಿಗಳು ಮುಂದಾಗಬೇಕೆಂದು ಜಯ ಕರ್ನಾಟಕ ಸಂಘಟನೆ ಒತ್ತಾಯಿಸುತ್ತದೆ. ಇಲ್ಲದೆ ಹೋದಲ್ಲಿ ಇನ್ನುಮುಂದೆ ನಮ್ಮ *ರಾಜ್ಯದ ನೆಲ-ಜಲ ಬಾಷೆಯ ಬಗ್ಗೆ ಕಾಳಜಿ* ತೋರಿಸದಿರುವ ನೀವು ಚುನಾವಣೆಗೆ ಸ್ಪರ್ಧಿಸಬಾರದೆಂದು ಚಳುವಳಿ ರೂಪಿಸಬೇಕಾಗುತ್ತದೆ
ತಕ್ಷಣ *28 ಸಂಸದರೂ ಸಹ ಪಕ್ಷಾತೀತವಾಗಿ ನಮ್ಮ ದೇಶದ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಈ ವಿಚಾರದಲ್ಲಿ ಪ್ರಧಾನ ಮಂತ್ರಿಗಳು ಮಧ್ಯ ಪ್ರವೇಶ ಮಾಡಿ ಸಂಕಷ್ಟ ಸೂತ್ರ ಪಾಲಿಸುವಂತ ನಿಯಮ ರೂಪಿಸುವ ಕ್ರಮಕ್ಕೆ ನಮ್ಮ ಸಂಸದರು ಒತ್ತಾಯ ಮಾಡಬೇಕು ನಮ್ಮ ನಾಡಿನ ಕಾವೇರಿ ಮತ್ತು ಮಹದಾಯಿ ಇನ್ನಿತರ ನದಿ ನೀರಿನ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಸ್ಯೆಗಳಿಗೆ ಶಾಶ್ವತ ಪರಿಹಾರ* ಒದಗಿಸಲು ಗಮನ ಹರಿಸಬೇಕೆಂದು ನಮ್ಮ ಸಂಸದರವರಿಗೆ ಆಗ್ರಹದ ಈ ಪತ್ರವನ್ನು ತಲುಪಿಸಲು ನಮ್ಮ ಜಯ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಜಗದೀಶ್ ರವರು ಮತ್ತು ರಾಜ್ಯ ಸಮಿತಿಯ ಹಾಗೂ ನಮ್ಮ ಪರವಾಗಿ ಜಿಲ್ಲಾಧಿಕಾರಿಗಳಾದ ತಮ್ಮ ಮೂಲಕ ನೀಡುತ್ತಿದ್ದೇವೆ. ಧನ್ಯವಾದಗಳು.
ಜಿಲ್ಲಾಧ್ಯಕ್ಷರಾದ ಸುಧೀರ್ ಎಂ ಮುಧೋಳ್ ರವರ ನೇತೃತ್ವದಲ್ಲಿ ಹೋರಾಟ ಮಾಡಲಾಯಿತು. ಈ ಸಂದರ್ಭದಲ್ಲಿ ರವಿ ಸಿದ್ಧಾಟಗಿಮಠ, ಲಕ್ಷ್ಮಣ ದೊಡ್ಡಮನಿ, ಶರೀಫ ಅಮ್ಮಿನಭಾವಿ, ಚಂದ್ರು ಅಂಗಡಿ, ಮಂಜುನಾಥ್ ಸುತಗಟ್ಟಿ, ನಾರಾಯಣ ಮಾದರ, ಹನುಮಂತ ಮುರೊಬ, ದುರ್ಗಪ್ಪ ಕಡಮನಿ. ಪರಶುರಾಮ್‌ ದೊಡ್ಡಮನಿ, ವಿನಾಯಕ ಜಿಜಿ, ಅಲ್ತಾಫ್ ಜಾಲಗಾರ, ರಾಜು ಸಂಕೀನ, ಗಿರೀಶ ಮೇಲಿನಮನಿ, ಬಸವರಾಜ ಕಲ್ಕನಿ, ಹಜರುದ್ದೀನ್ ಶೇಕ್, ಪೃಥ್ವಿರಾಜ್, ಶರಣ್ ಮೇಲಿನಮನಿ, ಅರುಣ್ ಮಂಗಲಗಟ್ಟಿ, ಹರೀಶ್ ಕಾಳೆ, ಕಿರಣ್ ಹೊನ್ನೂರ, ಮಂಜುನಾಥ ಅಮ್ಮಿನಭಾವಿ ಸೇರಿದಂತೆ ಹಲವರು ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *

You may have missed