ಗಾಂಧಿ ಪ್ರತಿಮೆ ಮುಂದೆ ಮೇಣದ ಬತ್ತಿ ಹಚ್ಚಿ-ಅತ್ಯಾಚಾರಿಗಳಿಗೆ ಗಲ್ಲಾಗಲಿ ಎಂದ ಸಂಘಟನೆಗಳು
ಧಾರವಾಡ: ಮಾಧನಬಾವಿ ಹಾಗೂ ಬೋಗುರ ಗ್ರಾಮದ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಖಂಡಿಸಿ ಹಾಗೂ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರಿನ ಗಾಂಧಿ ಪ್ರತಿಮೆಯ ಬಳಿ ಹಲವು ಸಂಘಟನೆಗಳು ಮೇಣದ ಬತ್ತಿ ಹಚ್ಚಿ ಮೌನಾಚರಣೆ ಆಚರಿಸಿದರು.
ಸಾಧನಾ ಮಾನವ ಹಕ್ಕುಗಳ ಒಕ್ಕೂಟ, ವಿಸ್ಮಯ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ, ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ರಕ್ಷಣಾ ಸಮಿತಿ, ಆರೂಢ ಸಂಸ್ಥೆ, ಕದಂಬ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಮೇಣದ ಬತ್ತಿ ಬೆಳಗಿಸಿ ಮೌನಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಡಾ. ಇಸಬೆಲ್ಲಾ ಝೇವಿಯರ್, ಸಾವಿತ್ರಿ ಯಳವತ್ತಿಮಠ, ಬಸವರಾಜ ಆನೆಗುಂದಿ, ಕಿಶೋರ ಕಟ್ಟಿ, ನಾಗರಾಜ ಹೂಗಾರ, ಮಾರುತಿ ನಾಯ್ಕ, ಅರ್ಜುನ ವಡ್ಡರ, ಚಂದ್ರಶೇಖರ ಹಿರೇಮಠ, ಹನಮಂತ ಭಜಂತ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.