ಧಾರವಾಡದಲ್ಲಿ ಪೊಲೀಸರ ವಿರುದ್ಧ ಹೋರಾಟ..!

ಧಾರವಾಡ: ಸ್ಥಳೀಯ ಶಹರ ಠಾಣೆಯ ಪೊಲೀಸರೂ ಸೇರಿದಂತೆ ವಿವಿಧ ಠಾಣೆಯಿಂದ ಬರುವ ಪೊಲೀಸರು, ಕಳ್ಳತನ ಮಾಡಿರೋ ಬಂಗಾರವನ್ನ ಖರೀದಿಸಿದ್ದರೆಂದು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ ಧಾರವಾಡದ ನಗರದ ಬಹುತೇಕ ಬಂಗಾರದ ವ್ಯಾಪಾರಸ್ಥರು ಗಾಂಧಿಚೌಕದಲ್ಲಿ ಹೋರಾಟ ಮಾಡಿದರು.
ಪೊಲೀಸರು ಆರೋಪಿಗಳ ಸಮೇತ ಬಂದ ಹಾಗೇ ತೋರಿಸಿ, ನಮ್ಮಲ್ಲೇ ಇರುವ ಅಂಗಡಿಗಳಿಂದ 100 ಗ್ರಾಂ, 200 ಗ್ರಾಂ ಬಂಗಾರ ಕೊಡು ಎಂದು ಪೀಡಿಸುತ್ತಾರೆ. ಕಳ್ಳರ ಮಾತುಗಳನ್ನ ಕೇಳಿ ನಮಗೆ ಕಿರಿಕಿರಿ ಕೊಡುತ್ತಿದ್ದಾರೆಂದು ದೂರಿದ ವ್ಯಾಪಾರಸ್ಥರು, ತಮ್ಮ ವಹಿವಾಟನ್ನ ಬಂದ್ ಮಾಡಿ ಹೋರಾಟಕ್ಕೆ ಇಳಿದರು.
ಕಳ್ಳತನದ ಪ್ರಕರಣದಲ್ಲಿ ಭಾಗಿಯಾದವರ ಬಂಗಾರವನ್ನ ಖರೀದಿ ಮಾಡಿದವರ ವಿರುದ್ಧ ಕಠಿಣ ಕ್ರಮವನ್ನ ಜರುಗಿಸಲಿ. ಅದನ್ನ ಬಿಟ್ಟು ಪದೇ ಪದೇ ಬಂದು ಕಿರುಕುಳ ನೀಡುವುದು, ಬಂಗಾರ ಪಡೆಯಲು ಮುಂದಾಗುವುದನ್ನ ನಾವು ಸಹಿಸೋದಿಲ್ಲವೆಂದು ವ್ಯಾಪಾರಸ್ಥರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಗಾಂಧಿಚೌಕ ಪ್ರದೇಶಕ್ಕೆ ಆಗಮಿಸಿದ ಇನ್ಸಪೆಕ್ಟರ್ ಶ್ರೀಧರ ಸತಾರೆ, ವ್ಯಾಪಾರಸ್ಥರ ಸಮಸ್ಯೆಯನ್ನ ಆಲಿಸಿದರು. ಕಿರುಕುಳ ಕೊಡುವ ಬಗ್ಗೆ ಘಟನೆ ನಡೆದರೇ ತಮ್ಮ ಗಮನಕ್ಕೆ ತನ್ನಿ ಎಂದು ಹೇಳಿದರು.