ದೋಣಿ ಸಾಗಲಿ.. ರಸ್ತೆಯುದ್ದಕ್ಕೂ- ಏನೂ ಕಥೆಯೋ ನೋಡೀರಿ..!

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಪ್ರತಿನಿಧಿಸುವ ಸೆಂಟ್ರಲ್ ಕ್ಷೇತ್ರದ ರಸ್ತೆಗಳಲ್ಲಿ ಮಕ್ಕಳು ದೋಣಿಯಾಟವಾಡುವ ಪ್ರಸಂಗ ಬಂದೊದಗಿದೆ ಎಂದು ಮಾರ್ಮಿಕವಾಗಿ ತೋರಿಸುವ ಪ್ರಯತ್ನವನ್ನ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ನವರು ಮಾಡಿದರು.
ಪ್ರತಿಭಟನೆ ಹೇಗಿತ್ತು ಎಂಬುದನ್ನ ಮೊದಲು ವೀಡಿಯೋ ನೋಡಿ..
ಹುಬ್ಬಳ್ಳಿ ಕಾಟನ್ ಮಾರ್ಕೆಟ್ ನಲ್ಲಿ ಮಕ್ಕಳು ದೋಣಿಯನ್ನ ಮಾಡಿ ರಸ್ತೆಯಲ್ಲಿ ನಿರ್ಮಾಣವಾಗಿರುವ ಹೊಂಡದಲ್ಲಿಯೇ ಆಟವಾಡಿದರು. ದೋಣಿಯಲ್ಲಿ ಜಗದೀಶ ಶೆಟ್ಟರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರದ ಸಮೇತ ದೋಣಿ ಮಾಡಿ, ನೀರಾಟವಾಡಿದರು.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ ಯುವ ಕಾಂಗ್ರೆಸ್ ಪ್ರಮುಖರಾದ ರಜತ ಉಳ್ಳಾಗಡ್ಡಿಮಠ, ಚೇತನ ಬಿಜವಾಡ, ಶಹಾಜಮಾನ ಮುಜಾಹಿದ, ಲಕ್ಷ್ಮಣ ಗಡ್ಡಿ, ಮಣಿಕಾಂತ ಪೀರಾಗೋಜಿ, ನವೀನ ಶಿಶನಳ್ಳಿ, ಪ್ರಜ್ವಲ ಮೋರೆ, ಹಜರತ ತಲವಾಯಿ, ಶ್ರೀನಿವಾಸ ಇಂಜಗನರಿ ಸೇರಿದಂತೆ ಹಲವರು ಭಾಗವಹಿಸಿದ್ದರು.