ಹುಬ್ಬಳ್ಳಿ- “ಬರತೇನಂದ ಶರಣಾ ಇನ್ನೂ ಬರಲಿಲ್ಲಾ”- ಗಣೇಶನಿಗಾಗಿ ಭಜನೆ ಹೋರಾಟ..
1 min readಗಣಪತಿ ಪ್ರತಿಷ್ಟಾಪನೆ ಅನುಮತಿಗೆ ಕೇಂದ್ರ ಸಚಿವ ಜೋಶಿ ಆಗ್ರಹ: ಮುಂದುವರೆದ ಅಹೋರಾತ್ರಿ ಧರಣಿ..
ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಗಣಪತಿ ಪ್ರತಿಷ್ಟಾಪನೆಗೆ ಒಂದಿಲ್ಲೊಂದು ರೀತಿಯಲ್ಲಿ ತೊಡಕುಗಳು ಎದುರಾಗುತ್ತಲೇ ಇದೆ. ಒಂದು ಕಡೆಗೆ ಬಿಜೆಪಿ ಕಾರ್ಯಕರ್ತರ ಅಹೋರಾತ್ರಿ ಹೋರಾಟ. ಮತ್ತೊಂದು ಕಡೆಯಲ್ಲಿ ಅನುಮತಿಗಾಗಿ ಕೇಂದ್ರ ಸಚಿವರ ಆಗ್ರಹ.
ಹೌದು..ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು, ಅನುಮತಿ ನೀಡುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ರಾಜ್ಯ ಸರ್ಕಾರದ ನಡೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಲಿಕೆ ಎದುರು ನಡೆದಿರುವ ಭಜನೆ ಹೋರಾಟ..
ದೇಶಾದ್ಯಂತ ಗಣಪತಿ ಉತ್ಸವ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿಯೂ ಕೂಡ ವಿನೂತನ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಆದರೆ ಈದ್ಗಾ ಮೈದಾನದಲ್ಲಿ ಅನುಮತಿ ನೀಡಲು ಮೀನಾಮೇಷ ಏಣಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಬಿಜೆಪಿ ಕಾರ್ಯಕರ್ತರು, ಭಜನೆ ಹಾಗೂ ಘೋಷಣೆ ಕೂಗುವ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಪ್ರತಿಭಟನೆಯಲ್ಲಿ ಶಾಸಕ ಅರವಿಂದ ಬೆಲ್ಲದ್, ಜಯತೀರ್ಥ ಕಟ್ಟಿ, ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಶಿವು ಮೆಣಸಿನಕಾಯಿ, ಈಶ್ವರಗೌಡ ಪಾಟೀಲ, ಮಹೇಂದ್ರ ಕೌತಾಳ, ಶಿವಾನಂದ ಮುತ್ತಣ್ಣನವರ, ಶಿವು ಹಿರೇಮಠ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.