MSIL ವಿರುದ್ಧ ಸಿಡಿದೆದ್ದ ಮಹಿಳೆಯರು-ಯುವಕರು: ಕಲಘಟಗಿ ಪಟ್ಟಣದಲ್ಲೇಕೆ ಹೀಗೆ..?
1 min readಧಾರವಾಡ: ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ಬಾಗವಾನ ಓಣಿ ಮತ್ತು ಸವಣೂರ ಅಗಸಿಯಲ್ಲಿ ಎಂಎಸ್ಐಎಲ್ ಮದ್ಯದಂಗಡಿಗಳನ್ನ ತೆರೆಯಲು ಅವಕಾಶ ನೀಡಬಾರದೆಂದು ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.
ಹಲವು ಮಹಿಳೆಯರು ಸೇರಿದಂತೆ ಯುವಕರು ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದೆಂದು ಆಗ್ರಹಿಸಿದರು. ಅಬಕಾರಿ ನಿರೀಕ್ಷಕ ಅಮೃತ್ ಗುಡಿ, Cpi ವಿಜಯ ಬಿರಾದಾರ್, Msil dist manager ಕೃಷ್ಣಮೂರ್ತಿ ಅವರಿಗೆ ಮನವಿ ನೀಡಿ, ಅವಕಾಶ ಕೊಡಬೇಡಿ ಎಂದು ಆಗ್ರಹಿಸಿದರು. ಸೊಯಬ್ ಪಾಟೀಲ್, ಬಸವರಾಜ್ ಕಾಂಡ್ಲಾಸ್ಕರ್ ಸೇರಿದಂತೆ ಸ್ಥಳೀಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮನವಿ ಪತ್ರದ ಪ್ರತಿ
ವಿಷಯ : ಕಲಘಟಗಿ ಪಟ್ಟಣದ ಬಾಗವಾನ ಓಣಿಯಲ್ಲಿ/ಸವಣೂರ ಅಗಸಿ (MSIL) ಮದ್ಯದ ಅಂಗಡಿ ಪ್ರಾರಂಭಿಸಿರುವುದರ ಕುರಿತು.
ಮಾನ್ಯರೇ,
ಈ ಹಿಂದೆ ಅಂದರೆ ಸನ್ 2018-19 ನೇ ಸಾಲಿನಿಂದ ಸತತ ಪರಿಶ್ರಮದಿಂದ ಬರೆದು ತಮ್ಮಲ್ಲಿ ವಿನಂತಿ ಮಾಡಿಕೊಂಡಿರುವ ಹಿನ್ನಲೆಯಲ್ಲಿ ಪುನಃ ಮದ್ಯದ (MSIL) ಅಂಗಡಿ ಮಾಡುವ ವಿಚಾರ ತಮ್ಮ ಎಲ್ಲ ಸಂಬಂಧಪಟ್ಟ ಇಲಾಖೆಗಳಿಗೆ ಅರ್ಜಿ ಸಲ್ಲಿಸಿದರೂ ಅಧಿಕೃತವಾಗಿ ಅಂಗಡಿ ನಿರ್ಮಿಸುವ ಕುರಿತು ನಮಗೆ ಮಾಹಿತಿ ಕೇಳಿ ಬರುತ್ತಿದೆ. ಕಾರಣ ನಮ್ಮ ಮೇಲೆ ತಮ್ಮ ಕನಿಕರವಾಗಲಿ ಅಥವಾ ಮಾನವೀಯ ದೃಷ್ಟಿಯಾಗಲಿ ಯಾರಿಗೂ ವಿಚಾರ ಬರುತ್ತಿಲ್ಲ ಸಮಾಜದ ಒಳ್ಳೆಯ ದೃಷ್ಠಿಯಿಂದ – ಈ ಹಿಂದೆ ಕಳುಹಿಸಿದ ಅಧಿಕೃತ ಟಪಾಲು (ಅರ್ಜಿ) ಗಳನ್ನು ಲಗತ್ತಿಸಿ ಕೊನೆಯ ವಿನಂತಿ ಪತ್ರದೊಂದಿಗೆ
ಕಲಘಟಗಿ ಪಟ್ಟಣದ ಬಾಗವಾನ ಓಣಿ, ಕೆ.ಎಮ್.ಸಿ,ರಸ್ತೆಗೆ ಹೊಂದಿಕೊಂಡು ಜಯಪಾಲ ಕರೆಣ್ಣವರ ಅವರು ಕಟ್ಟಡದಲ್ಲಿ ಪ್ರಾರಂಭಿಸಲಾಗಿದೆ. ಮದ್ಯದಂಗಡಿ ಪ್ರಾರಂಭವಾದರೆ ಇಲ್ಲಿ ಜನರು ವಾಸಿಸುತ್ತಿರುವ ಬಹಳಷ್ಟು ಮನೆಗಳಿದ್ದು ಈ ಸಾರಾಯಿ ಅಂಗಡಿಗಳಿದಂದ ಚಿಕ್ಕ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗೂ ಇದೆ ಜಾಗದ ಹತ್ತಿರ ಹಜರತ ಫೀರ್ ಮೆಹಬೂಬ ಸುಪಾರಿ ದರ್ಗಾ, ಶ್ರೀ ಮಹಾಲಕ್ಷ್ಮೀ ದೇವಿ ದೇವಸ್ಥಾನ ಮತ್ತು ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಇರುವಂತಹ ಕೋಚಿಂಗ್ ಸೆಂಟರ್ ಇವೆಲ್ಲವುಗಳು ಬಹಳ ಹತ್ತಿರ ಇರುತ್ತದೆ. ಉತ್ತರ ಕರ್ನಾಟಕದಲ್ಲಿಯೇ ಅತಿ ದೊಡ್ಡ ಜಾತ್ರೆಯಾದ ಕಲಘಟಗಿ ಗ್ರಾಮದೇವಿ ಜಾತ್ರಾ ಉತ್ಸವ ನಡೆಯುವ ಮುಖ್ಯ ಸ್ಥಳದಲ್ಲೇ ಈ ಸಾರಾಯಿ ಅಂಗಡಿಯನ್ನು ಪ್ರಾರಂಭ ಮಾಡಿದ್ದಾರೆ. ಇದೆ ಮುಖ್ಯ ರಸ್ತೆಯಲ್ಲೇ ಶಾಲಾ ಕಾಲೇಜುಗಳ ಸಾವಿರಾರು ವಿದ್ಯಾರ್ಥಿನಿಯರು ಪ್ರತಿನಿತ್ಯ ಪ್ರಯಾಣ ನೆಡೆಸುತ್ತಾರೆ. ಇನ್ನೂ ಹಲವಾರು ಕಾರಣಗಳಿದ್ದು ಇಲ್ಲ ವಿವಿಧ ಸಮಾಜದವರು, ಶಾಲಾ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮದ್ಯದಂಗಡಿ ಬೇಡ.
ತಮ್ಮಲ್ಲಿ ಕಳಕಳಿಯಿಂದ ಬರೆದುಕೊಡುತ್ತಿದ್ದ ಈ ಪತ್ರಕ್ಕೆ ಅತೀ ಸೂಕ್ಷ್ಮ ವಿಚಾರ ಮಾಡಿ ನಿರ್ಣಯ ತೆಗೆದುಕೊಂಡು ಲಿಖಿತ ಪತ್ರದ ಮೂಲಕ ನಮಗೆ ತಿಳಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಈ ಹಿಂದೆ ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿಳಾದ ಮಾನ್ಯ ಶ್ರೀಮತಿ ದೀಪಾ ಚೋಳನ್ ಅವರ ಗಮನಕ್ಕೆ ನಾವು ಈ ವಿಚಾರವನ್ನು ತೆಗೆದುಕೊಂಡಾಗ ಅವರು ಈ ಸಾರಾಯಿ ಅಂಗಡಿ ಪ್ರಾರಂಭ ಮಾಡಿಸಲ್ಲು ಅವರ ಅನುಮತಿಯನ್ನು ನೀಡಿರಲಿಲ್ಲ ಆದ ಕಾರಣ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೆವೆ. ಒಂದಾನೊಂದು ವೇಳೆ ಪುನಃ ಮಧ್ಯದ ಅಂಗಡಿ (ಜಯಪಾಲ್ ಕೆರೆಣ್ಣವರ ರವರ ಕಟ್ಟಡದಲ್ಲಿ) ಇದೇ ಸ್ಥಳದಲ್ಲಿ ಪ್ರಾರಂಭಿಸಲು ಅನುಮತಿ ನೀಡಿದರೆ “ಉಗ್ರ ಹೋರಾಟ ಮಾಡಲು ನಾವು ಹಾಗೂ ಸಂಘಟನೆಗಳು ನಿರ್ಧರಿಸಿದ್ದೇವೆ.