Posts Slider

Karnataka Voice

Latest Kannada News

ಧಾರವಾಡದಲ್ಲಿ ‘ಪವರ್’ಗಾಗಿ ಪ್ರತಿಭಟನೆ: ಕುನ್ನಿಭಾವಿ ನೇತೃತ್ವ

Spread the love

ಧಾರವಾಡ: ಪವರ್ ಟಿವಿ ಬಂದ್ ಮಾಡಿರುವ ಕ್ರಮವನ್ನ ಖಂಡಿಸಿ ಧಾರವಾಡದಲ್ಲಿಂದು ಜಿಲ್ಲಾಧಿಕಾರಿ ಕಚೇರಿ ಎದುರು ಪತ್ರಕರ್ತರು ಪ್ರತಿಭಟನೆ ನಡೆಸಿದರು.

ಸಿಎಂ ಪುತ್ರನ ವಿರುದ್ಧನ ವರದಿ ಪ್ರಸಾರವಾದ ಹಿನ್ನೆಲೆಯಲ್ಲಿ ಪವರ್ ಟಿವಿಯನ್ನ ಕಳೆದ ಎರಡು ದಿನದಿಂದ ಬಂದ್ ಮಾಡಲಾಗಿದ್ದು, ನಿನ್ನೆ ರಾಜ್ಯದ ಪತ್ರಕರ್ತರು ಸಿಎಂಗೆ ಭೇಟಿ ನೀಡಿ, ಮನವಿ ಮಾಡಿದ್ದರು.

ಸಿಎಂ ಯಡಿಯೂರಪ್ಪ ಕೂಡಾ ಇದಕ್ಕೆ ಸ್ಪಂಧಿಸಿದ್ದರೂ ಎಂದು ಹೇಳಲಾಗಿತ್ತಾದರೂ, ಇಲ್ಲಿಯವರೆಗೆ ಪವರ್ ಟಿವಿ ಆರಂಭಿಸಲು ಬೇಕಾಗಿರುವ  ತಾಂತ್ರಿಕ ಸಲಕರಣೆಗಳು ನೀಡಿಲ್ಲ.

ಪವರ್ ಟಿವಿ ಮೇಲೆ ನಡೆದಿರುವ ದಬ್ಬಾಳಿಕೆಯನ್ನ ಖಂಡಿಸಿ ಧಾರವಾಡದಲ್ಲಿ ಪತ್ರಕರ್ತ ಮುಸ್ತಫಾ ಕುನ್ನಿಭಾವಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸಿಎಂಗೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಮಿಲಿಂದ ಫಿಸೆ, ರಾಜು ಕರಣಿ, ಸೂರ್ಯಕಾಂತ ಶಿರೂರ, ಜಾವೇದ ಅಧೋನಿ, ಪ್ರಶಾಂತ ದಿನ್ನಿ, ಮಂಜುನಾಥ ಯಡಳ್ಳಿ, ವಾಸೀಮ ಭಾವಿಮನಿ, ಗುರುನಾಥ ಕಟ್ಟಿಮನಿ, ನಾಗರಾಜ ಕಿರಣಗಿ, ಅರ್ಬಾಜ, ವಿಠ್ಠಲ ಕರಡಿಗುಡ್ಡ, ಮಂಜು ಕವಳಿ, ಶ್ರೀಧರ ಮುಂಡರಗಿ, ಓಂಕಾರಿ, ಮಹಾಂತೇಶ ಕಣವಿ, ವೆಂಕನಗೌಡ, ವಿನಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *