ಕೊರೋನಾಗಿಂತಲೂ ಫೈನಾನ್ಸವರ ಕಾಟ ಹೆಚ್ಚು: ಗ್ರಾಮೀಣ ಪ್ರದೇಶದಲ್ಲಿ ಜನ ಕಂಗಾಲು
ಮೈಸೂರು: ಪ್ರಪಂಚದಾಧ್ಯಂತರ ಕೊರೋನಾ ವೈರಸ್ ಅಟ್ಟಹಾಸ ಹೆಚ್ಚುತ್ತಿದ್ದರೂ, ನಂಜನಗೂಡಿನ ಹಲವು ಗ್ರಾಮಗಳಲ್ಲಿ ಪೈನಾನ್ಸನವರ ಕಾಟ ಹೆಚ್ಚಾಗಿದ್ದು, ಗ್ರಾಮೀಣ ಪ್ರದೇಶದ ಜನರು ಪೈನಾನ್ಸಿಯರು ಬಂದ ತಕ್ಷಣ ಮರೆಯಾಗಿ ಕೂಡುವ ಸ್ಥಿತಿ ನಿರ್ಮಾಣವಾಗಿದೆ.
ನಂಜನಗೂಡಿನ ಕೆಲವು ಗ್ರಾಮಗಳಲ್ಲಿ ವಸೂಲಾತಿ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕೊರೋನಾದಿಂದ ಮುಕ್ತಿ ಪಡೆಯುತ್ತಿರುವ ನಂಜನಗೂಡು ಜನತೆಗೆ ಶುರುವಾಗಿದೆ ಈಗ ಖಾಸಗಿ ಫೈನಾನ್ಸ್ ಸಿಬ್ಬಂದಿಗಳ ಕಾಟ ಹೆಚ್ಚಾಗಿದೆ.
ಮೂರು ತಿಂಗಳ ಕಾಲ ಸಾಲಗಾರರಿಗೆ ವಸೂಲಿ ಮಾಡಬಾರದೆಂಬ ಆರ್.ಬಿ.ಐ ಆದೇಶವನ್ನ ಧಿಕ್ಕರಿಸಿ ವಸೂಲಿಗೆ ಇಳಿದಿರುವ ಖಾಸಗಿ ಫೈನಾನ್ಸ್ ಸಿಬ್ಬಂದಿಗಳು. ನಂಜನಗೂಡು ತಾಲೂಕಿನ ಹಿರೇಗೌಡನಹುಂಡಿ, ಹಾಡ್ಯದ ಹುಂಡಿ, ಮಡುವೀನಹಳ್ಳಿ ಗ್ರಾಮಗಳಲ್ಲಿ ಮಹಿಳೆಯರಿಗೆ ಸಾಲ ಮರುಪಾವತಿಸುವಂತೆ ಒತ್ತಡ ಹೇರುತ್ತಿದ್ದ ಸಾಲ ಪಡೆದವರು ಮರುಪಾವತಿಸಲು ಹಣವಿಲ್ಲದೇ ಸಂಕಷ್ಟದಲ್ಲಿ ಸಿಲುಕಿದ್ದಾರೆ.