ತಬ್ಲೀಘಿ ಹೆಸರಿಂದ ಬೊಬ್ಬರಿದಿದ್ದ ಅಯೋಗ್ಯ ಕೇಂದ್ರ-ರಾಜ್ಯ ಸರಕಾರದಿಂದ ಕೊರೋನಾ ಹೆಚ್ಚಳ: ಪ್ರಿಯಾಂಕಾ ಖರ್ಗೆ ತಪರಾಕಿ
1 min readಕಲಬುರಗಿ: ಕಲಬುರಗಿ ಸೇರಿದಂತೆ ರಾಜ್ಯದಲ್ಲಿ ಕರೊನಾ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಮಹಾರಾಷ್ಟ್ರದಿಂದ ಬಂದವರಿಂದ ಸೊಂಕು ಹೆಚ್ಚಾಗ್ತಿದೆ ಅಂತಾ ಹೇಳಿದ್ದಾರೆ. ಸೋಂಕಿನ ಪ್ರಮಾಣ ಹೆಚ್ಚಳ ಆಗೋದಕ್ಕೆ ಬಿಜೆಪಿ ಕಾರಣ. ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗೋದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರವೆ ಕಾರಣ ಎಂದು ಮಾಜಿ ಸಚಿವ ಪ್ರಿಯಾಂಕಾ ಖರ್ಗೆ ದೂರಿದರು.
ಯಾವಾಗ ಅನ್ ಲಾಕ್ ಮಾಡಬೇಕಿತ್ತು, ಆವಾಗ ಲಾಕ್ ಮಾಡಿದ್ರು. ಯಾವಾಗ ಲಾಕ್ ಮಾಡಬೇಕಿತ್ತು, ಆವಾಗ ಅನ್ ಲಾಕ್ ಮಾಡಿದ್ರು. ಹೊರ ರಾಜ್ಯದಲ್ಲಿರುವ ಕನ್ನಡಿಗರನ್ನ ಕರೆಯಿಸಿ ಲಾಕ್ ಡೌನ್ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಆದ್ರೆ, ಈ ಅಯೋಗ್ಯ ಸರ್ಕಾರ ಅದರ ಬಗ್ಗೆ ಕೇರ್ ಮಾಡಲಿಲ್ಲ. ನಾನು ಖುದ್ದಾಗಿ ಕೆಎಸ್ ಆರ್ ಟಿಸಿ ಗೆ ಪತ್ರ ಬರೆದು ಬಸ್ ಕೊಡುವಂತೆ ಮನವಿ ಮಾಡಿದ್ದೆ. ಕಲಬುರಗಿ ಸಂಸದ ಉಮೇಶ್ ಜಾಧವಗೆ ನಾಚಿಕೆಯಾಗಬೇಕು. ನೀವು ಮುಂಬೈನಿಂದ ವಾಪಸ್ ಬನ್ನಿ ನಿಮಗೆ ಕ್ವಾರೆಂಟೈನ್ ಮಾಡೋದಿಲ್ಲ ಅಂತಾ ಹೇಳಿದ್ದಾರೆ. ಒಬ್ಬ ಡಾಕ್ಟರ್ ಆಗಿ ಉಮೇಶ್ ಜಾಧವ್ ಈ ರೀತಿ ಹೇಳೋಕೆ ನಾಚಿಕೆ ಆಗಬೇಕು. ಆರಂಭದಲ್ಲಿ ತಬ್ಲೀಘಿ ನಂಟಿನಿಂದ ನಂಜು ವಿಸ್ತರಿಸಿದಾಗ ಬಿಜೆಪಿಯವರು ಬೊಬ್ಬರಿಸುತ್ತಿದ್ದರು. ಇವಾಗ ಬೇರೆ ಸಮುದಾಯದ ಜನರಿಗೆ ಬಂದ ತಕ್ಷಣ ಸೈಲೆಂಟ್ ಆಗಿದೆ ಸರ್ಕಾರ. 1 ಲಕ್ಷ ಕ್ಕಿಂತ ಅಧಿಕ ಕುಟುಂಬಗಳು ಕರ್ನಾಟಕಕ್ಕೆ ಬರೋದಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.