ಧಾ/ಹು: ಖಾಸಗಿ ಶಾಲೆಗಳ “ದೋಚುವಿಕೆ”ಗೆ ಕಡಿವಾಣ ಹಾಕೋಕೆ ಯಾರಾದರೂ ಇದ್ದೀರಾ…!?
1 min readಧಾರವಾಡ/ಹುಬ್ಬಳ್ಳಿ: ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಖಾಸಗಿ ಶಾಲೆಗಳಿಗೆ ಮೊರೆ ಹೋಗುತ್ತಿರುವ ಪಾಲಕರ ಜೇಬಿಗೆ ಸಾಧ್ಯವಾದಷ್ಟು ಕತ್ತರಿ ಹಾಕುವ ಉದ್ದೇಶವನ್ನ ಕೆಲವು ಖಾಸಗಿ ಶಾಲೆಗಳು ಹೊಂದಿದ್ದು, ಇವುಗಳಿಗೆ ಕಡಿವಾಣ ಹಾಕಲು ಸರಕಾರಗಳು ಮುಂದೆ ಬಾರದಿರುವುದು ಸೋಜಿಗ ಮೂಡಿಸುತ್ತಿದೆ.
ಅವಳಿನಗರದಲ್ಲಿನ ನೂರಾರು ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ಸಂಸ್ಥೆಗಳು ತಮಗಿಷ್ಟವಾದ ರೀತಿಯಲ್ಲಿ ಪ್ರವೇಶ ಧನವನ್ನ ಬೇರೆ ಬೇರೆ ಹೆಸರಿನಲ್ಲಿ ಪಡೆಯುತ್ತಿವೆ.
ಸರಕಾರಿ ಶಾಲೆಗಳಲ್ಲಿ ಸರಕಾರದ ಸಂಬಳ ಪಡೆದು ಓದಿಸದೇ ಹೋಗುವ ಹಲವು ಶಿಕ್ಷಕವರ್ಗ ಇರುವುದರಿಂದ ಖಾಸಗಿ ಶಿಕ್ಷಣ ಕೊಡಿಸಲು ಪಾಲಕರು ಹೋಗುತ್ತಿದ್ದಾರೆ. “ತಾವಂತೂ ಚೆನ್ನಾಗಿ ಕಲಿಲಿಲ್ಲ, ಮಕ್ಕಳಾದರೂ ಚೆನ್ನಾಗಿರೋ ಶಾಲೆಯಲ್ಲಿ ಓದ್ಲಿ” ಎಂದುಕೊಂಡವರ ಸ್ಥಿತಿಯಂತೂ ಮುಗಿದೇ ಹೋಯಿತು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರು ಅವಳಿನಗರದ ನಿಜವಾದ ಸ್ಥಿತಿಯನ್ನ ಅಂಕಿ ಅಂಶ ಕೊಡುವ ನೌಕರರನ್ನ ಬಿಟ್ಟು, ಖುದ್ದಾಗಿ ಹಲವು ಶಾಲೆ-ಕಾಲೇಜಿಗೆ ತೆರಳಿ ನೋಡಿದಾಗ ಸತ್ಯದ ದರ್ಶನವಾಗತ್ತೆ.
ಸರಕಾರದ ಲಕ್ಷ ಲಕ್ಷ ಸಂಬಳ ಪಡೆಯುವ ಶಿಕ್ಷಕರು ಎಷ್ಟು ಗಂಟೆಗೆ ಬರ್ತಾರೆ, ಎಷ್ಟು ಗಂಟೆಗೆ ಹೋಗ್ತಾರೆ, ಸಂಘದ ಹೆಸರಿನಲ್ಲಿ ಅಲೆದಾಡುವವರು ಯಾರೂ, ಇದಕ್ಕೇಲ್ಲ ಕುಮ್ಮಕ್ಕು ಕೊಡುವ ಅಧಿಕಾರಿಗಳು ಯಾರೂ ಎಂಬುದನ್ನ ಅರ್ಥ ಮಾಡಿಕೊಳ್ಳಬೇಕಿದೆ.
ಸಚಿವ ಸಂತೋಷ ಲಾಡ ಅವರು ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ಹಾಡುಹಗಲಿನ ಲೂಟಿಯನ್ನ ತಪ್ಪಿಸಲು ಮುಂದಾಗಬೇಕು ಇಲ್ಲವೇ, ಸರಕಾರಿ ಶಾಲೆಗಳನ್ನ ಸುಧಾರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಾಗಿದೆ.
ಅಂದ ಹಾಗೇ, ಸಚಿವ ಲಾಡ್ ಅವರು ಜಿಲ್ಲೆಯನ್ನ ಎರಡು ಸ್ಥಾನಕ್ಕೆ ಮೇಲೇರಿಸಿದ ಡಿಡಿಪಿಐ ಅವರನ್ನ ಇನ್ನೂ ಸತ್ಕರಿಸಿಲ್ಲ ಎಂಬ ವಿಷಯವನ್ನ ಇಲ್ಲಿ ಸ್ಮರಿಸಲಾಗಿದೆ.