ಜುಲೈ 16ರಿಂದ ಖಾಸಗಿ ಆಸ್ಪತ್ರೆಯಲ್ಲೂ ಕೊರೋನಾ ಚಿಕಿತ್ಸೆ: ಡಾ.ರವೀಂದ್ರ
ಬೆಂಗಳೂರು: ಆಸ್ಪತ್ರೆಗಳಲ್ಲಿ 50% ಬೆಡ್‌ಗಳನ್ನ ನೀಡಲು ಒಪ್ಪಿಗೆ ಕೊಟ್ಟಿದ್ದೇವೆ. ಇದೇ ತಿಂಗಳ 16 ರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಒಪ್ಪಿಗೆ ಸಿಕ್ಕಿದೆ ಎಂದು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥ ಡಾ.ರವೀಂದ್ರ ಹೇಳಿದರು.
ಸರಕಾರದ ಜೊತೆ ಮಾತುಕತೆ ನಡೆಸಿದ ನಂತರ ಮಾಧ್ಯಮದ ಜೊತೆ ಮಾತನಾಡಿದ ಡಾ.ರವೀಂದ್ರ, ಮಾಧ್ಯಮದಲ್ಲಿ ಬಂದ ರೀತಿ ಕೆಲವು ಖಾಸಗಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ತೊಂದರೆ ಆಗಿದೆ. ಅದಕ್ಕೆ ಕೆಲವೊಂದು ಕಾರಣಗಳಿದ್ವು. ಈಗ ಕೋರ್ಡಿನೇಷನ್ ಕಮಿಟಿ ಮೂಲಕ ಬೆಡ್ ಎಲ್ಲೆಲ್ಲಿ ಇವೆ ಅನ್ನೋದು ಗೊತ್ತಾಗುತ್ತೆ. ಸರ್ಕಾರ ಎಲ್ಲಾ ರೀತಿಯಲ್ಲೂ ಸ್ಪಂದಿಸಿದೆ. ಖಾಸಗಿ ಹೆಲ್ತ್ ವರ್ಕರ್‌ಗಳಿಗೆ 50 ಲಕ್ಷ ಕೋವಿಡ್ ವಿಮೆ ಕೊಡಲು ಸರ್ಕಾರ ಒಪ್ಪಿಗೆ ಕೊಟ್ಟಿದೆ ಎಂದರು.
ದರ ನಿಗದಿ ವಿಚಾರವಾಗಿ ಹೇಳಿದ ಅವರು, ಮೂರು ಸುತ್ತು ಮೀಟಿಂಗ್ ಆಗಿತ್ತು. ಬಿಪಿಎಲ್ ರೋಗಿಗಳಿಗೆ ನಾವು ಕೊಟ್ಟಿದ್ದ ಮನವಿ ಸರ್ಕಾರ ಒಪ್ಪಿಗೆ ಕೊಟ್ಟಿದೆ. ನಾನ್ ಬಿಪಿಎಲ್ ರೋಗಿಗಳ ಚಿಕಿತ್ಸಾ ವೆಚ್ಚದಲ್ಲಿ 20% ಕಡಿಮೆ ಮಾಡಿದ್ದಾರೆ. ಆದ್ರೆ, ಇಂತಹ ಸಂದರ್ಭಗಳಲ್ಲಿ ಅದಕ್ಕೆ ಡಿಮ್ಯಾಂಡ್ ಮಾಡೋದ ಸರಿಯಲ್ಲ. ನಮಗೆ ಏನೇ ಸಮಸ್ಯೆ ಆದ್ರೂ ನಮ್ಮ ನೆರವಿಗೆ ಸರ್ಕಾರ ಬರುತ್ತದೆ ಎಂದು ಡಾ.ರವೀಂದ್ರ ಹೇಳಿದರು.