ಪ್ರಾಥಮಿಕ ಶಾಲಾ ಶಿಕ್ಷಕ ಕೊರೋನಾಗೆ ಬಲಿ: ಅದೊಂದೇ ಜಿಲ್ಲೆಯಲ್ಲಿ 18ಕ್ಕೇರಿದ ಶಿಕ್ಷಕರ ಸಾವು

ಹಾವೇರಿ: ಕಳೆದ ಹದಿನಾಲ್ಕು ದಿನಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿದ್ದ ಶಿಕ್ಷಕರೋರ್ವರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿರುವ ಘಟನೆ ಇಂದು ನಡೆದಿದೆ.
ಹಾವೇರಿ ತಾಲೂಕಿನ ಮರೋಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರೇ ಕೋವಿಡ್-19ಗೆ ಬಲಿಯಾಗಿದ್ದು, ಕುಟುಂಬದಲ್ಲಿ ಆಕ್ರಂದನ ಮನೆ ಮಾಡಿದೆ.
ಐವತೈದು ವರ್ಷದ ಶಿಕ್ಷಕ ಮರೋಳ ಗ್ರಾಮದಲ್ಲಿ ವಿದ್ಯಾರ್ಥಿಗಳ ಪಾಲಿನ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಇಂದು ಅವರ ಸಾವಿನ ಸುದ್ದಿಯಿಂದ ಗ್ರಾಮದಲ್ಲಿಯೂ ದುಃಖ ಮಡುವುಗಟ್ಟಿದೆ.
ಕಳೆದ ಹದಿನಾಲ್ಕು ದಿನಗಳ ಹಿಂದೆ ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ನಂತರ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯ ಕೋವಿಡ್-19 ಸೆಂಟರಗೆ ದಾಖಲು ಮಾಡಲಾಗಿತ್ತು. ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿದೆ ಎಂದುಕೊಳ್ಳುತ್ತಿರುವಾಗಲೇ ಶಿಕ್ಷಕರು ಸಾವಿಗೀಡಾಗಿದ್ದಾರೆ.
ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ನಿಂದ ಇಲ್ಲಿಯವರೆಗೆ 18 ಶಿಕ್ಷಕರು ಸಾವಿಗೀಡಾಗಿದ್ದಾರೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಅಂದಾನಪ್ಪ ವಡಗೇರಿ ಮಾಹಿತಿ ನೀಡಿದ್ದಾರೆ.