ಕಂಟೋನ್ಮೆಂಟ್ ಪ್ರದೇಶ ತೆರವಿಗೆ ಜನರ ಹೋರಾಟ: ಜನರ ನೆಮ್ಮದಿ ಕೆಡಿಸಿದ ವ್ಯವಸ್ಥೆ
ಹಾವೇರಿ: ಕಂಟೋನ್ಮೆಂಟ್ ಪ್ರದೇಶ ತೆರವು ಮಾಡುವಂತೆ ಹಾವೇರಿ ಜಿಲ್ಲೆ ಸವಣೂರು ಪಟ್ಟಣದ ಪಟ್ಟಣದ ಎಸ್.ಎಂ.ಕೃಷ್ಣ ನಗರ ಮತ್ತು ರಾಜೀವಗಾಂಧಿ ನಗರದ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಮೇ 4, 2020ರಂದು ಓರ್ವನಲ್ಲಿ ಸೋಂಕು ಕಾಣಿಸಿಕೊಳ್ತಿದ್ದ ಹಾಗೇ ಪ್ರದೇಶವನ್ನ ಜಿಲ್ಲಾಡಳಿತ ಸೀಲ್ ಡೌನ್ ಮಾಡಿತ್ತು. ಓರ್ವನಿಂದ ಮೂರಕ್ಕೆ ಏರಿದ್ದ ಸೋಂಕಿತರ ಸಂಖ್ಯೆ. ಮೂವರು ಡಿಸ್ಚಾರ್ಜ್ ಆಗಿದ್ರೂ ಸೀಲ್ ಡೌನ್ ತೆರವು ಮಾಡದ್ದಕ್ಕೆ ಸ್ಥಳೀಯರ ಆಕ್ರೋಶಗೊಂಡಿದ್ದರು.
ಮೇ 23, ಮೇ 25 ಮತ್ತು ಜೂನ್ 1 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಮೂವರು ಸೋಂಕಿತರು. ಕೂಲಿ ಕೆಲಸವನ್ನೆ ನಂಬಿರೋ ಪ್ರದೇಶದ ಬಹುತೇಕ ಜನರು. ಸ್ಥಳಕ್ಕೆ ಸವಣೂರು ಠಾಣೆ ಪೊಲೀಸರ ಭೇಟಿ, ಪರಿಶೀಲನೆ.