ಸಂಗೊಳ್ಳಿ ರಾಯಣ್ಣ, ಶಿವಾಜಿ ಪ್ರತಿಮೆಗೆ ಅಪಮಾನ ಕೃತ್ಯ ಯಾರೂ ಸಹಿಸಲಾಗದು- ಕೇಂದ್ರ ಸಚಿವ ಜೋಶಿ
1 min readನವದೆಹಲಿ : ದೇಶಕ್ಕಾಗಿ ತ್ಯಾಗ ಮಾಡಿದ ಶಿವಾಜಿ ಮಹಾರಾಜರ ಮ ಪ್ರತಿಮೆಗೆ ಮಸಿ ಬಳಿಯುವ ಕೃತ್ಯವನ್ನು ಯಾರೂ ಸಹಿಸುವುದಿಲ್ಲ, ಇದು ನಿಜಕ್ಕೂ ಖಂಡನಾರ್ಹ ಎಂದು ಕೇಂದ್ರ ಸಚಿವ ಶ್ರೀ ಪ್ರಲ್ಹಾದಜೋಷಿಯವರು ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನ ಸ್ಯಾಂಕಿ ಕೆರೆ ಬಳಿಯ ಛತ್ರಪತಿ ಶಿವಾಜಿ ಪ್ರತಿಮೆಗೆ ಮಸಿ ಬಳಿದ ಕೃತ್ಯಕ್ಕೆ ಸಂಬಂಧಿಸಿದಂತೆ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಲು ಸೂಚಿಸುತ್ತೇನೆ ಎಂದಿರುವ ಜೋಶಿ, ಸರ್ಕಾರ ಕಾನೂನು ಭಂಗ ಮಾಡುವವರಿಗೆ ಅವಕಾಶ ನೀಡುವುದಿಲ್ಲ, ದೇಶಭಕ್ತರಿಗೆ ಗೌರವ ಕೊಡಬೇಕು ಎಂದು ನಾನು ಎಲ್ಲರಿಗೂ ಈ ಮೂಲಕ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಬೆಳಗಾವಿ ಹಾಗೂ ಬೆಂಗಳೂರಿನ ಘಟನೆಗಳ ಬಗ್ಗೆ ಸಂಬಂಧಿಸಿದಂತೆ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಿಕೊಳ್ಳಲು ಎಲ್ಲಾ ಅಗತ್ಯ ಕ್ರಮಗಳನ್ನು, ತೆಗೆದುಕೊಳ್ಳಲು ನಿರ್ದೇಶಿಸಿದ್ದೇನೆ ಎಂದು ಸಚಿವ ಜೋಶಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದಿರುವುದು, ಬೆಳಗಾವಿಯಲ್ಲಿ ರಾಯಣ್ಣ ಪ್ರತಿಮೆ ಭಗ್ನ, ವಾಹನಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ನಮ್ಮ ಸರ್ಕಾರ ಇಂತಹ ಘಟನೆಗಳನ್ನು ಸಹಿಸುವುದಿಲ್ಲ. ಸರ್ಕಾರ ಕಾನೂನು ಭಂಗ ಮಾಡುವವರಿಗೆ ಅವಕಾಶ ನೀಡಲ್ಲ. ದೇಶಭಕ್ತರಿಗೆ ಗೌರವ ಕೊಡಬೇಕು ಎಂದು ನಾನು ಎಲ್ಲರಲೂ ಮನವಿ ಮಾಡುತ್ತೇನೆ , ಸಂಗೊಳ್ಳಿ ರಾಯಣ್ಣ, ಶಿವಾಜಿ ಮಹಾರಾಜ್ ಇಬ್ಬರೂ ದೇಶಭಕ್ತರು. ಇವರು ಭಾಷೆ, ಸಮುದಾಯ ಎಲ್ಲವನ್ನೂ ಮೀರಿ ಬೆಳೆದವರು. ಇಂತಹವರ ಪ್ರತಿಮೆಗಳಿಗೆ ಮಸಿ ಬಳಿಯುವಂತಹ ಹೀನ ಕೃತ್ಯಕ್ಕೆ ಇಳಿಯಬಾರದು ಎಂದೂ ಜೋಶಿ ಹೇಳಿದ್ದಾರೆ.
ಇಂತಹ ಕೃತ್ಯಗಳು ನಡೆದಾಗ ರಾಜಕೀಯ ವ್ಯಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುವ ಕೃತ್ಯಕ್ಕೆ ಕೈ ಹಾಕಬಾರದು ಎಂದೂ ಜೋಶಿ ಹೇಳಿದ್ದಾರೆ.
ಸಾಮಾಜಿಕ ಸಾಮರಸ್ಯ, ಶಾಂತಿ ಕದಡುವ ಪ್ರಯತ್ನ ಇದಾಗಿದೆ. ಸರಕಾರ ಇಂತಹವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು.